ಬೆಂಗಳೂರು, ಮೇ 13(DaijiworldNews/MS): ಮೂರು ಪಕ್ಷಗಳ ಭಾರೀ ಹಣಾಹಣಿಯ ನಡುವೆ ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಕಾರ್ಯ ಆರಂಭವಾಗಲಿದೆ.
ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದ್ದು 2615 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಒಟ್ಟು ಅಭ್ಯರ್ಥಿ ಪೈಕಿ 2430ಮಂದಿ ಪುರುಷರು& 184ಮಂದಿ ಮಹಿಳಾ ಅಭ್ಯರ್ಥಿಗಳು. ಒಬ್ಬರು ತೃತೀಯ ಲಿಂಗಿ ಅಭ್ಯರ್ಥಿ ಇದ್ದಾರೆ. BJPಯ 224 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದರೆ ಕಾಂಗ್ರೆಸ್ನಿಂದ 223 ಮಂದಿ ಸ್ಪರ್ಧಿಸಿದ್ದಾರೆ. JDSನಿಂದ 209, ಆಪ್ನಿಂದ 209, ಸಿಪಿಐನಿಂದ 4, ಬಿಎಸ್ ಪಿಯಿಂದ 133, ಎನ್ ಸಿ ಪಿ ಇಬ್ಬರು, ನೊಂದಾಯಿತ ಮಾನ್ಯತೆ ಪಡೆದ ಪಕ್ಷದಿಂದ 254, 918 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ..
ಬೆಳಗ್ಗೆ 7.30ಕ್ಕೆ ಮತಯಂತ್ರಗಳನ್ನು ಶೇಖರಿಸಿಟ್ಟಿರುವ ಸ್ಚ್ರಾಂಗ್ ರೂಗಳನ್ನು ಕೇಂದ್ರ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಬಳಿಕ ಮತ ಎಣಿಕೆಗೆ ಸಿದ್ದಪಡಿಸಲಾಗಿರುವ ಕೊಠಡಿಗಳಿಗೆ ಮತಯಂತ್ರಗಳನ್ನು ರವಾನಿಸಲಾಗುತ್ತದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದ್ದು, ಮೊದಲು ಅಂಚೆಮತ ಎಣಿಕೆ ಕಾರ್ಯ ಆರಂಭವಾಗುತ್ತದೆ. ಬಳಿಕ ಮತಯಂತ್ರಣಗಳ ಎಣಿಕೆ ಕಾರ್ಯ ಆರಂಭವಾಗುತ್ತದೆ ಎಂದು ತಿಳಿದುಬಂದಿದೆ.