ಬೆಂಗಳೂರು, ಮೇ 10 (DaijiworldNews/SM): ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪೂರ್ಣಗೊಂಡಿದ್ದು, ಮತದಾರರ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ. ಈ ನಡುವೆ ಇದೀಗ ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಗೆ ಬಹುಮತ ಸಿಗಲಿದೆ ಎಂದು ಹಲವು ಸಮೀಕ್ಷೆಗಳಲ್ಲಿ ಉಲ್ಲೇಖವಾಗಿದೆ.
ಸದ್ಯ ಹೊರ ಬಿದ್ದಿರುವ ಎಕ್ಸಿಟ್ ಪೋಲ್ ಗಳ ಪ್ರಕಾರ ನಾಲ್ಕು ಸಂಸ್ಥೆಗಳ ಸಮೀಕ್ಷೆ ಕಾಂಗ್ರೆಸ್ ಗೆ ಬಹುಮತ ಎಂದಿದೆ.
ಇಂಡಿಯಾ ಟಿವಿ: ಕಾಂಗ್ರೆಸ್- 106-120 ಬಿಜೆಪಿ 80-90
ಟೈಮ್ಸ್ ಇಟಿಜಿ: ಕಾಂಗ್ರೆಸ್- 106-120 ಬಿಜೆಪಿ 78-92
ಇಂಡಿಯ ಟುಡೆ: ಕಾಂಗ್ರೆಸ್- 122-140 ಬಿಜೆಪಿ 62-80
ಟುಡೇಸ್ ಚಾಣಕ್ಯ: ಕಾಂಗ್ರೆಸ್ 120 ಬಿಜೆಪಿ 92 ಸ್ಥಾನಗಳನ್ನು ಪಡೆಯಲಿದೆ ಎಂದು ಉಲ್ಲೇಖಿಸಿದೆ.
ಇನ್ನು ರಾಜ್ಯ ವಿಧಾನಸಭೆಯಲ್ಲಿ 224 ಸದಸ್ಯ ಬಲ ಇದ್ದು, 113 ಮ್ಯಾಜಿಕ್ ನಂಬರ್ ಆಗಿದೆ. 4 ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಬಹುಮಾನ ಎಂದಿದ್ದು, ಉಳಿದ ಮೂರು ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎನ್ನಲಾಗಿದೆ. ಆದರೆ, ಅಂತಿಮ ತೀರ್ಪು ಸಿಗೋದು ಮೇ ೧೩ರಂದು.