ಬೆಂಗಳೂರು,ಮೇ 10 (DaijiworldNews/MS): ಕರ್ನಾಟಕ ವಿಧಾನಸಭೆಯ ನಿರ್ಣಾಯಕ ಘಟ್ಟದ ಸಂದರ್ಭದಲ್ಲಿ ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದೆ. ಸಾಮಾನ್ಯವಾಗಿ ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ರಾಜ್ಯದ ಮತದಾರರಿಂದ ಅಭಿಪ್ರಾಯ ಸಂಗ್ರಹಿಸಿ ನಡೆಸುವಂಥ ಸಮೀಕ್ಷೆ ಇದಾಗಿದೆ.
ಸಿವೋಟರ್ ಮತಗಟ್ಟೆ ಸಮೀಕ್ಷೆ ಪ್ರಕಾರ ಕಾಂಗ್ರೆಸ್ಗೆ 100 ರಿಂದ 112 ಸ್ಥಾನ ದೊರೆಯುವ ನಿರೀಕ್ಷೆ ಇದ್ದು, ಬಿಜೆಪಿಗೆ 83 ರಿಂದ 95 ಹಾಗೂ ಜೆಡಿಎಸ್ಗೆ 21 ರಿಂದ 29 ಸ್ಥಾನಗಳು ದೊರೆಯುವ ಸಾಧ್ಯತೆ ಇದೆ. ಇತರರು 2 ರಿಂದ 6 ಸ್ಥಾನ ಪಡೆಯುವ ನಿರೀಕ್ಷೆ ಇದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಕಾಂಗ್ರೆಸ್ ಪಕ್ಷವು ಶೇ 41.1 ರಷ್ಟು ಮತ ಹಂಚಿಕೆ ಪಡೆದಿದೆ
ಜೀ ನ್ಯೂಸ್-ಮ್ಯಾಟ್ರಿಜ್ ಮತದಾನೋತ್ತರ ಸಮೀಕ್ಷೆ ಪ್ರಕಾರಬಿಜೆಪಿ-79-89, ಕಾಂಗ್ರೆಸ್: 108-118, ಜೆಡಿಎಸ್: 25-35, ಇತರೆ: 2-4 ಸ್ಥಾನ ಪಡೆಯಲಿದೆ.
ನ್ಯೂಸ್ ಆಫ್ ನೇಷನ್ ಸಮೀಕ್ಷೆ: ಬಿಜೆಪಿಗೆ ಸರಳ ಬಹುಮತ ಸಾಧ್ಯತೆ. ಸಮೀಕ್ಷೆಯಂತೆ, ಬಿಜೆಪಿಗೆ 114, ಕಾಂಗ್ರೆಸ್ಗೆ 86 ಸ್ಥಾನ ್ ಜೆಡಿಎಸ್ಗೆ 21 ಸ್ಥಾನ, ಇತರ 3 ಸ್ಥಾನ ಸಿಗುವ ಸಾಧ್ಯತೆ ಇದೆ.
ಸುವರ್ಣ ನ್ಯೂಸ್: ಬಿಜೆಪಿ- 94-117,ಕಾಂಗ್ರೆಸ್- 91-106,ಜೆಡಿಎಸ್- 14-24, ಇತರೆ- 2-6