ಕುನೋ, ಮೇ 09 (DaijiworldNews/HR): ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದಿಂದ ತಂದು ಇರಿಸಲಾಗಿದ್ದ ಹೆಣ್ಣು ಚೀತಾ ದಕ್ಷ ಉದ್ಯಾನವನದೊಳಗೆ ಇತರ ಚೀತಾಗಳೊಂದಿಗೆ ಕಾದಾಟದಲ್ಲಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಪುರುಷ ಚೀತಾಗಳೊಂದಿಗಿನ ಗಲಾಟೆಯಲ್ಲಿ ದಕ್ಷ ಚೀತಾ ಸಾವನ್ನಪ್ಪಿದ್ದು, ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಚೀತಾಗಳನ್ನು ತಂದ ನಂತರ ಕುನೋದಲ್ಲಿ ಸಾವನ್ನಪ್ಪಿದ ಮೂರನೇ ಚೀತಾ ಇದಾಗಿದೆ.
ಇನ್ನು ಕಳೆದ ವರ್ಷದಿಂದ ಇಪ್ಪತ್ತು ಚೀತಾಗಳನ್ನು ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದ್ದು, ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಎರಡು ಚೀತಾಗಳು ಸಾವನ್ನಪ್ಪಿವೆ.
ಸಶಾ ಎಂಬ ಹೆಸರಿನ ಚೀತಾ ಭಾರತಕ್ಕೆ ಕರೆತರುವ ಮೊದಲು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿತ್ತು. ಎಪ್ರಿಲ್ನಲ್ಲಿ ಎರಡನೇ ಚೀತಾಉದಯ್ ರಾಷ್ಟ್ರೀಯ ಉದ್ಯಾನವನದಲ್ಲಿ ಅಸ್ವಸ್ಥಗೊಂಡಿದ್ದು ಚಿಕಿತ್ಸೆ ವೇಳೆ ಸಾವನ್ನಪ್ಪಿತ್ತು.