ಶ್ರೀನಗರ, ಮೇ 07 (DaijiworldNews/HR): ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 5 ಕೆಜಿ ಸುಧಾರಿತ ಸ್ಫೋಟಕ ಸಾಧನದೊಂದಿಗೆ (ಐಇಡಿ) ಉಗ್ರನೊಬ್ಬನನ್ನು ಬಂಧಿಸಿ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಶ್ಮೀರ ವಲಯ ಪೊಲೀಸರು, ಪುಲ್ವಾಮಾ ಪೊಲೀಸರು ಭಯೋತ್ಪಾದಕ ಸಹಚರ ಇಶ್ಫಾಕ್ ಅಹ್ಮದ್ ವಾನಿ ಅನ್ನು ಬಂಧಿಸುವ ಮತ್ತು ಐಇಡಿ (ಸುಮಾರು 5-6 ಕೆಜಿ) ವಶಪಡಿಸಿಕೊಳ್ಳುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಕಳೆದ ಶುಕ್ರವಾರ ರಜೌರಿ ಸೆಕ್ಟರ್ನಲ್ಲಿ ಉಗ್ರರನ್ನು ಹೊರಹಾಕಲು ಪಡೆಗಳು ತೆರಳಿದಾಗ ಭಯೋತ್ಪಾದಕರು ಪ್ರಚೋದಿಸಿದ ಸ್ಫೋಟದಲ್ಲಿ ಐವರು ಸೈನಿಕರು ಹತರಾಗಿದ್ದರು.