ವಿಜಯಪುರ, ಮೇ 06 (DaijiworldNews/HR): ವಿಜಯಪುರದಲ್ಲಿ ಹಾಡುಹಗಲೇ ಪಾಲಿಕೆ ಸದಸ್ಯೆಯ ಪತಿ, ರೌಡಿಶೀಟರ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶನಿವಾರ ನಗರದ ವಜ್ರಹನುಮಾನ ಪ್ರದೇಶದ ಚಾಂದಪೂರ ಕಾಲೋನಿ ಪ್ರದೇಶದಲ್ಲಿ ರೌಡಿ ಶೀಟರ್ ಹೈದರ್ ನದಾಫ್ ಮೇಲೆ ಗುಂಡಿನ ದಾಳಿ ನಡೆಸಿ ದಾಳಿಕೋರರು ಪರಾರಿಯಾಗಿದ್ದಾರೆ.
ಹೈದರ್ ಪತ್ನಿ ನಿಶಾತ್ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ವಾರ್ಡ್ ನಂಬರ್ 19ರ ಎಂಐಎಂ ಪಕ್ಷದ ಸದಸ್ಯೆಯಾಗಿದ್ದಾರೆ.
ಪಾಲಿಕೆ ಚುನಾವಣೆ ದ್ವೇಷ, ಹೈದರ್ ಮೇಲಿದ್ದ ವಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.