ಜಮ್ಮುಮತ್ತುಕಾಶ್ಮೀರ,ಮೇ6(DaijiworldNews/KH):ಭಾರತೀಯ ಸೇನೆಯು ಸ್ವದೇಶಿ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್ಹೆಚ್) 'ಧ್ರುವ್' ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ಮೇ 4 ರಂದು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನಲ್ಲಿ ಧ್ರುವ್ ಹೆಲಿಕಾಪ್ಟರ್ ಪತನವಾಗಿತ್ತು. ಅಪಘಾತದಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಭಾನುವಾರ ಕೇರಳದ ಕೊಚ್ಚಿಯಲ್ಲಿ ಪೈಲಟ್ ತರಬೇತಿಯಲ್ಲಿದ್ದ ವೇಳೆ ಬಲವಂತದ ಲ್ಯಾಂಡಿಂಗ್ ಮಾಡಬೇಕಾಗಿ ಬಂದಿತ್ತು. ಈ ಬೆಳವಣಿಗೆ ರಕ್ಷಣಾ ಸಚಿವಾಲಯವು 191 ಧ್ರುವ್ ಹೆಲಿಕಾಪ್ಟರ್ಗಳ ಕಾರ್ಯಾಚರಣೆಯನ್ನು 1 ತಿಂಗಳ ಕಾಲ ನಿಲ್ಲಿಸಲು ನಿರ್ಧರಿಸಿದೆ.
ಮಾರ್ಚ್ನಲ್ಲಿ ನಡೆದ ಎರಡು ಅಪಘಾತಗಳ ನಂತರ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ಗಳು ಇತ್ತೀಚೆಗೆ ಒಂದು ತಿಂಗಳಿಗೂ ಹೆಚ್ಚು ಕಾಲ ಹೆಲಿಕಾಪ್ಟರ್ ಮತ್ತೆ ಬಳಕೆ ಮಾಡಿರಲಿಲ್ಲ.
ಎಎಲ್ಹೆಚ್ ನ ಹೆಲಿಕಾಪ್ಟರ್ಗಳನ್ನು ಭಾರತೀಯ ಕೋಸ್ಟ್ ಗಾರ್ಡ್ನೊಂದಿಗೆ ಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇರಿದಂತೆ ಎಲ್ಲಾ ಮೂರು ರಕ್ಷಣಾ ಪಡೆಗಳು ಹಾರಿಸುತ್ತವೆ. ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಧ್ರುವ್ ಹೆಲಿಕಾಪ್ಟರ್ಗಳು ಮತ್ತೆ ಕಾರ್ಯಾಚರಣೆಯಲ್ಲಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಹೆಲಿಕಾಪ್ಟರ್ ಕಾರ್ಯಾಚರಣೆಯನ್ನು ಮರುಪ್ರಾರಂಭಿಸಲು ಕ್ಲಿಯರೆನ್ಸ್ ಅನ್ನು ಹೆಲಿಕಾಪ್ಟರ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನೀಡಬೇಕಾಗಿದೆ.
ಧ್ರುವ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಭಾರತೀಯ ಸೈನ್ಯ ಬಳಕೆ ಮಾಡುತ್ತಿದ್ದು, ಸಿಯಾಚಿನ್ ಹಿಮನದಿ ಮತ್ತು ಲಡಾಖ್ನಲ್ಲಿ ಸೈನಿಕರಿಗೆ ಸೇವೆ ಸಲ್ಲಿಸಲು ಇದು ಅತ್ಯಂತ ಎತ್ತರದ ಪ್ರದೇಶಗಳಿಗೆ ಹಾರುತ್ತದೆ. ಇತ್ತೀಚಿನ ದಿನಗಳಲ್ಲಿ, ಹೆಲಿಕಾಪ್ಟರ್ ಯಾಂತ್ರಿಕ ದೋಷಗಳು ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.