ನವದೆಹಲಿ, ಮೇ 05 (DaijiworldNews/HR): ಯುದ್ಧ ಪೀಡಿತ ಸುಡಾನ್ನಿಂದ ಭಾರತಕ್ಕೆ ಇಲ್ಲಿಯವರೆಗೂ ಆಪರೇಷನ್ ಕಾವೇರಿ ಅಡಿಯಲ್ಲಿ ಸುಮಾರು 3,800 ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, 47 ಭಾರತೀಯರೊಂದಿಗೆ ಭಾರತೀಯ ವಾಯುಪಡೆಯ C-130J ವಿಮಾನವು ದೆಹಲಿಗೆ ಹೋಗುವ ವಿಮಾನದಲ್ಲಿ ಜೆಡ್ಡಾದಿಂದ ಹೊರಟಿದೆ. ಈ ಮೂಲಕ, ಆಪರೇಷನ್ ಕಾವೇರಿ ಅಡಿಯಲ್ಲಿ ಸುಮಾರು 3800 ಜನರನ್ನು ಈಗ ಸುಡಾನ್ನಿಂದ ರಕ್ಷಿಸಲಾಗಿದೆ ಎಂದಿದ್ದಾರೆ.
ಇನ್ನು ಗುರುವಾರ ಸುಡಾನ್ನಿಂದ 192 ಭಾರತೀಯರು ಅಹಮದಾಬಾದ್ಗೆ ಬಂದಿಳಿದಿದ್ದು, ಅವರನ್ನು ಭಾರತೀಯ ವಾಯುಪಡೆಯ C17 ವಿಮಾನದಲ್ಲಿ ಪೋರ್ಟ್ ಸುಡಾನ್ನಿಂದ ಅಹಮದಾಬಾದ್ಗೆ ಗುಜರಾತ್ಗೆ ಕರೆತರಲಾಯಿತು.