ನವದೆಹಲಿ, ಮೇ 04 (DaijiworldNews/SM) : ಭಾರತಕ್ಕೆ 2010ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮೊದಲ ಚಿನ್ನದ ಪದಕ ಗೆದ್ದು ಕೊಟ್ಟಿದ್ದ ಭಾರತದ ಕುಸ್ತಿಪಟು ಗೀತಾ ಪೋಗಟ್ ಮತ್ತು ಅವರ ಪತಿ ಪವನ್ ಸರೋಹಾ ಅವರನ್ನು ಸಿಂಗು ಗಡಿಯಲ್ಲಿ ದೆಹಲಿ ಪೋಲಿಸರು ಬಂಧಿಸಿ ಕಸ್ಟಡಿಯಲ್ಲಿರಿಸಿರುವ ಬಗ್ಗೆ ವರದಿಯಾಗಿದೆ.
ಡಬ್ಲೂಎಫ್ಐ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ಭೂಷಣ್ ಸಿಂಗ್ ಅವರ ವಿರುದ್ಧ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಕುಸ್ತಿಪಟು ಗೀತಾ ಪೋಗಟ್ ಮತ್ತು ಅವರ ಪತಿ ಪವನ್ ಸರೋಹಾ ತೆರಳುತ್ತಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ʻನನ್ನನ್ನು ಮತ್ತು ನನ್ನ ಪತಿ ಪವನ್ ಸರೋಹಾ ಅವರನ್ನು ದೆಹಲಿ ಪೋಲಿಸರು ಬಂಧಿಸಿದ್ದಾರೆʼ ಎಂದು ಪೋಗಟ್ ಟ್ವೀಟ್ ಮಾಡಿದ್ದಾರೆ.