ಕೊಪ್ಪಳ, ಮೇ 03 (DaijiworldNews/HR): ಕಾಂಗ್ರೆಸ್ ಪಕ್ಷವು ಬಜರಂಗ ದಳ ನಿಷೇಧ ಮಾಡುವ ಕುರಿತು ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದು, ಇದು ಪ್ರಣಾಳಿಕೆಯ ವಿಷಯವಾ ? ನಿಷೇಧ ಮಾಡುವುದು ಪರಿಹಾರವಾ ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ಬಜರಂಗ ದಳ ನಿಷೇಧ ಮಾಡುವ ಮಾತನ್ನಾಡುತ್ತಿದ್ದಾರೆ. ನಿಷೇಧ ಮಾಡುವುದು ಪರಿಹಾರವಾ ? ಸಮಾಜದಲ್ಲಿ ಸುಮಧುರ ವಾತಾವರಣ ತರಬೇಕು. ಸಂಘಟನೆ ಬ್ಯಾನ್ ಮಾಡೋದು ಪರಿಹಾರವಲ್ಲ. ಅಲ್ಲಿ ಯಾರು ತಪ್ಪು ಮಾಡಿದ್ದಾರೆ, ಆ ಮೂಲ ಹಿಡಿಯಬೇಕು ಎಂದರು.
ಇನ್ನು ಬಜರಂಗ ದಳದಲ್ಲಿ ಅಮಾಯಕ ಮಕ್ಕಳ ಉಪಯೋಗ ಮಾಡುತ್ತಾರೆ. ಮಕ್ಕಳಿಗೆ ಭಾವನಾತ್ಮಕ ವಿಷಯ ಮೆದುಳಿಗೆ ತುಂಬುವ ಕೆಲಸ ಮಾಡುತ್ತಾರೆ. ಅಂತಹ ಚಟುವಟಿಕೆ ಕಡಿಮೆ ಮಾಡಬೇಕು. ಕಾಂಗ್ರೆಸ್ ಸರ್ಕಾರ ಹಿಂದೆ ಇತ್ತಲ್ಲಾ ಆಗ ಏಕೆ ಮಾತನಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.