ಬೆಂಗಳೂರು, ಮೇ 03 (DaijiworldNews/MS): ನಮ್ಮ ಪ್ರಣಾಳಿಕೆಯಲ್ಲಿ ಬದಲಾವಣೆ ಇಲ್ಲ. ನಾವೂ ಆಂಜನೇಯ ಭಕ್ತರು. ಆದರೆ ಆಂಜನೇಯನಿಗೂ ಭಜರಂಗದಳ ಸಂಘಟನೆಗೂ ಏನ್ ಸಂಬಂಧ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, "ಕೇವಲ ಅವರು ಮಾತ್ರವಲ್ಲ, ನಾವು ಕೂಡಾ ಅಂಜನೇಯಾ ಭಕ್ತರು. ಶಾಂತಿ ತೋಟ ಎಂದಿಗೂ ಕದಲಬಾರದು. ಬಿಜೆಪಿ ಎತ್ತಿಕಟ್ಟುತ್ತಿದ್ದು, ಇದು ಜನಕ್ಕೂ ಅರ್ಥ ಅಗಿದೆ ಆಂಜನೇಯ ಬೇರೆ ಭಜರಂಗದಳ ಬೇರೆ" ಎಂದಿದ್ದಾರೆ.
ಮೇ.4ರಂದು ಹನುಮ ಚಾಲಿಸ ಪಠಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ‘ಹನುಮ ಚಾಲಿಸ ನಾವು ದಿನಾ ಮಾಡ್ತೀವಿ. ಅವರೊಬ್ಬರೇನಾ ಮಾಡೋದು. ಹಿಂದೆ ಇದ್ದ ಆರೆಸ್ಸೆಸ್ ಬೇರೆ, ಆದರೆ ಈಗಿನ ಆರೆಸ್ಸೆಸ್ ಬೇರೆ ಎಂದಿದ್ದಾರೆ.
ಕುಂಬಳ ಕಾಯಿ ಕಳ್ಳ ಅಂದ್ರೆ, ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತೀರಾ. ಮೊದಲು ನೀವು ದೇಶ ಉಳಿಸಿ, ಹೊಟ್ಟೆಗೆ ಏನ್ ಕೊಟ್ರಿ, ಉದ್ಯೋಗ ಏನ್ ಕೊಟ್ರಿ ಎನ್ನುವುದು ಮೊದಲು ಹೇಳಿ. ಬಿಜೆಪಿ ಅವರು ಒಂದೊಂದು ವಿಷಯ ತೆಗೆದುಕೊಂಡು ಹೀಗೆ ಮಾಡ್ತಿದ್ದಾರೆ. ಇದೆಲ್ಲ ಈ ಬಾರಿಯ ಚುನಾವಣೆಯಲ್ಲಿ ನಡೆಯೋದಿಲ್ಲ. ನಾನು ಹಿಂದೂ, ನಾನು ಆಂಜನೇಯ ಭಕ್ತ, ರಾಮನ ಭಕ್ತ. ನಮಗೆ 141 ಸೀಟು ಬರೋದು ಪಕ್ಕಾ ಇದು ಮೇ.13 ರಂದು ಫಲಿತಾಂಶದ ವೇಳೇ ಸ್ಪಷ್ಟವಾಗುತ್ತೆ ಎಂದು ಹೇಳಿದ್ದಾರೆ.