ನವದೆಹಲಿ, ಮೇ 05 (DaijiworldNews/MS): ವಾಡಿಯಾ ಗ್ರೂಪ್ ಮಾಲೀಕತ್ವದ ಗೋ ಫಸ್ಟ್ ವಿಮಾನಯಾನ ಕಂಪನಿ ನಷ್ಟ ಅನುಭವಿಸುತ್ತಿದೆ. ಈ ಬಗ್ಗೆ ಸ್ವಯಂ ಪ್ರೇರಿತವಾಗಿ ಕಂಪನಿಯ ಆಡಳಿತ ಮಂಡಳಿಯೂ ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿಗೆ ಸ್ವಯಂ ಪ್ರೇರಿತವಾಗಿ ದಾಖಲೆಗಳನ್ನು ಸಲ್ಲಿಸಿದೆ.
ಇದಲ್ಲದೇ ಮೇ 3 ಮತ್ತು5 ರಿಂದ ಎಲ್ಲಾ ಗೋ ಫಸ್ಟ್ ವಿಮಾನಗಳು ರದ್ದಾಗಲಿದೆ ಎಂದು ವಿಮಾನಯಾನ ಸಂಸ್ಥೆಯು ತನ್ನ ಈ ನಿರ್ಧಾರವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (DGCA) ತಿಳಿಸಿದೆ.
ಸದ್ಯದ ಪರಿಸ್ಥಿತಿಗೆ ಅಮೆರಿಕದ ಪ್ರಾಟ್ ಆಯಂಡ್ ವ್ಹಿಟ್ನಿ ಕಂಪನಿಯೇ ಕಾರಣ ಎಂದು ದೂರಿದ್ದು, ಮುಂದಿನ ಎರಡು ದಿನಗಳವರೆಗೆ ಫ್ಲೈಟ್ ಬುಕ್ಕಿಂಗ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ. ಪ್ರಾಟ್ ಆಯಂಡ್ ವ್ಹಿಟ್ನಿ ಕಂಪನಿ ಇಂಜಿನ್ಗಳನ್ನು ಸರಬರಾಜು ಮಾಡದ ಕಾರಣ ಗೋ ಏರ್ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗಾಗಿ ವಿಮಾನಗಳನ್ನು ಗ್ರೌಂಡಿಂಗ್ ಮಾಡವ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದೆ.
ನ್ಯಾಯಮಂಡಳಿಯಲ್ಲಿ ಜೆಟ್ ಏರ್ವೆಸ್ ದಿವಾಳಿ ಘೋಷಣೆ ಮಾಡಿದ ಅದೇ ಪ್ರಕ್ರಿಯೆ ಅನುಸರಿಸುತ್ತಿರುವ ದೇಶದ 2ನೇ ವಿಮಾನಯಾನ ಸಂಸ್ಥೆ ಗೋ ಫಸ್ಟ್ ಏರ್ ಆಗಿದೆ.