ನವದೆಹಲಿ, ಮೇ 02 (DaijiworldNews/MS): ಬಿಡುಗಡೆಗೂ ಮೊದಲೇ ವಿವಾದ ಸೃಷ್ಟಿಸಿದ 'ಕೇರಳ ಸ್ಟೋರಿ' ಸಿನಿಮಾ ಸಂಬಂಧಿಸಿದ ಅರ್ಜಿ ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಸುದೀಪ್ತೋ ಸೇನ್ ನಿರ್ದೇಶನದ ಮತ್ತು ವಿಪುಲ್ ಅಮೃತಲಾಲ್ ಶಾ ನಿರ್ಮಿಸಿದ ಚಲನಚಿತ್ರ ಕೇರಳ ಸ್ಟೋರಿಯೂ ದ್ವೇಷದ ಹರಡುತ್ತದೆ ಎಂದು ಬಿಡುಗಡೆ ಸ್ಥಗಿತಗೊಳಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಭೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದೆ
ಚಿತ್ರಕ್ಕೆ ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿದ್ದು, ದ್ವೇಷ ಭಾವನೆ ಕೆರಳಿಸುವ ವಿಚಾರಗಳಿದ್ದರೆ ಮಂಡಳಿಯನ್ನು ಸಂಪರ್ಕಿಸಬೇಕು. ಈ ಹಂತದಲ್ಲಿ ಚಿತ್ರಕ್ಕೆ ತಡೆ ನೀಡಲು ಸಾಧ್ಯವಿಲ್ಲ ಮತ್ತು ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾ. ಎಂ.ಕೆ ಜೋಸೆಫ್ ಮತ್ತು ಬಿ.ವಿ ನಾಗರತ್ನ ಅವರ ಪೀಠ ಹೇಳಿದೆ.