ಪ್ರಯಾಗ್ರಾಜ್, ಏ 01 (DaijiworldNews/HR): ಮಥುರಾ ಶ್ರೀಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದಂತೆ ಹಿಂದೂಗಳು ಸಲ್ಲಿಸಿದ ಅರ್ಜಿ ವಿಚಾರಣೆಗೆ ಯೋಗ್ಯವಾಗಿದೆ ಎಂಬ ಜಿಲ್ಲಾ ನ್ಯಾಯಾಧೀಶರ ತೀರ್ಪು ಪ್ರಶ್ನಿಸಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತಲ್ಲಿಹಾಕಿದೆ. ಈ ಸಂಬಂಧ ಹೊಸದಾಗಿ ವಿಚಾರಣೆ ನಡೆಸುವಂತೆ ಮಥುರಾ ಜಿಲ್ಲಾ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶಿದೆ.
ಎಲ್ಲಾ ಕಕ್ಷಿದಾರರು ತಮ್ಮ ವಾದವನ್ನು ಮಥುರಾದ ಜಿಲ್ಲಾ ನ್ಯಾಯಾಧೀಶರ ಮುಂದೆ ಹೊಸದಾಗಿ ಮಂಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.
13.37 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಶಾಹಿ ಮಸೀದಿ ಈದ್ಗಾ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಬಾಲಕೃಷ್ಣ ಅವರು ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಮತ್ತು ಇತರರ ಮೂಲಕ ಕಳೆದ ವರ್ಷ ಡಿಸೆಂಬರ್ 8 ರಂದು ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗ (III) ನ್ಯಾಯಾಲಯದಲ್ಲಿ ಒತ್ತಾಯಿಸಿದ್ದರು.
1973 ರಲ್ಲಿ, ಮಸೀದಿ ಟ್ರಸ್ಟ್ ಮತ್ತು ದೇವಾಲಯದ ಆಡಳಿತದ ನಡುವಿನ ಒಪ್ಪಂದದ ಆಧಾರದ ಮೇಲೆ ಸಿವಿಲ್ ನ್ಯಾಯಾಲಯವು ಎರಡೂ ಪಕ್ಷಗಳಿಗೆ ಭೂಮಿಯನ್ನು ನೀಡಿತು. ಬಳಿಕ 2016 ರಲ್ಲಿ, 1973 ರ ತೀರ್ಪನ್ನು ಪ್ರಶ್ನಿಸಿ ಹೊಸ ಅರ್ಜಿಯನ್ನು ಸಲ್ಲಿಸಲಾಯಿತು.
ಇನ್ನು ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗವು ಸೆಪ್ಟೆಂಬರ್ 30, 2020 ರಂದು ದಾವೆಯನ್ನು ಸ್ವೀಕಾರಾರ್ಹವಲ್ಲ ಎಂದು ತಿರಸ್ಕರಿಸಿತ್ತು.