ನವದೆಹಲಿ, ಮೇ 1 (DaijiworldNews/KK):ಚಾಲಕನೊಬ್ಬ ತನ್ನ ಕಾರಿನ ಬಾನೆಟ್ನಲ್ಲಿ ವ್ಯಕ್ತಿಯೊಬ್ಬರು ಸಿಲುಕಿದ್ದರೂ ಕಾರನ್ನು ನಿಲ್ಲಿಸದೆ ಸುಮಾರು 3 ಕಿ.ಮೀ. ಹೋದ ಘಟನೆ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಕಾರು ದೆಹಲಿಯ ಆಶ್ರಮ ಚೌಕ್ನಿಂದ ನಿಜಾಮುದ್ದೀನ್ ದರ್ಗಾ ಕಡೆಗೆ ಹೋಗುತ್ತಿದ್ದಾಗ ನಡೆದಿದೆ.
ಈ ಕಾರು ಬಿಹಾರ ಸಂಸದೆ ವೀಣಾದೇವಿ ಅವರದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಘಟನೆ ವೇಳೆ ಸಂಸದರು ಕಾರಿನಲ್ಲಿ ಇರಲಿಲ್ಲ. ಕಾರಿನ ಚಾಲಕನನ್ನು ರಾಮಚಂದ್ರ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ. ಹಲ್ಲೆಗೊಳಗಾದವರನ್ನು ಬಾನೆಟ್ ಮೇಲೆ ನೇತಾಡುತ್ತಿದ್ದ ಯುವಕನನ್ನು ಕ್ಯಾಬ್ ಚಾಲಕ ಚೇತನ್ ಎಂದು ಗುರುತಿಸಲಾಗಿದೆ.
ಈ ಕುರಿರು ಮಾತನಾಡಿರುವ ಚೇತನ್, ನಾನು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪ್ರಯಾಣಿಕರನ್ನು ಬಿಟ್ಟು ಹಿಂತಿರುಗುತ್ತಿದ್ದೆ. ಈ ವೇಳೆ ಸಂಸದರ ಕಾರು ನನ್ನ ಕಾರಿಗೆ ಮೂರು ಬಾರಿ ಸ್ಪರ್ಶಿಸಿತು, ಆ ವೇಳೆ ನಾನು ನನ್ನ ಕಾರಿನಿಂದ ಹೊರಬಂದು ಅವರ ಕಾರಿನ ಮುಂದೆ ನಿಂತಾಗ ಕಾರನ್ನು ಓಡಿಸಲು ಪ್ರಾರಂಭಿಸಿದ್ದಾರೆ. ನಾನು ಬಾನೆಟ್ನಲ್ಲಿ ಸಿಲುಕಿಕೊಂಡಿದ್ದರು ಚಾಲಕ ಲೆಕ್ಕಿಸದೇ ಆಶ್ರಮ ಚೌಕ್ನಿಂದ ನಿಜಾಮುದ್ದೀನ್ಗೆ ನನ್ನನ್ನು ಬಾನೆಟ್ನಲ್ಲಿ ನೇತುಹಾಕಿಕೊಂಡು ಹೋಗಿದ್ದಾರೆ ಎಂದರು.
ಇನ್ನು ನಾನು ನಿಲ್ಲಿಸಿ ಎಂದು ಕೇಳಿದೆ, ಆದರೆ ಚಾಲಕ ನಿಲ್ಲಿಸಲಿಲ್ಲ. ಆತ ಸಂಪೂರ್ಣವಾಗಿ ಕುಡಿದ ಅಮಲಿನಲ್ಲಿದ್ದ ಎಂದು ತಿಳಿಸಿದ್ದಾರೆ.