ನವದೆಹಲಿ,ಏ.30(DaijiworldNews/KK):ಹಿಂಸಾಚಾರ ಪೀಡಿತ ಸುಡಾನ್ನಲ್ಲಿ ಸಿಲುಕಿರುವ 229 ಭಾರತೀಯರನ್ನು ಆಪರೇಷನ್ ಕಾವೇರಿ ಹೆಸರಿನ ಕಾರ್ಯಾಚರಣೆಯ ಮೂಲಕ ಮತ್ತೊಂದು ಬ್ಯಾಚ್ ಮೂಲಕ ದೆಹಲಿಗೆ ಕರೆತರಲಾಗಿದೆ.
365 ಜನರು ಆಫ್ರಿಕನ್ ದೇಶ ಸುಡಾನ್ನಿಂದ ದೆಹಲಿಗೆ ಮರಳಿದ ಒಂದು ದಿನದ ನಂತರ, ಮತ್ತೊಂದು ಬ್ಯಾಚ್ ನಲ್ಲಿ ಇಂದು 229 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ರವಾನೆ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಮತ್ತೊಂದು ವಿಮಾನವು 229 ಪ್ರಯಾಣಿಕರನ್ನು ಬೆಂಗಳೂರಿಗೆ ಕರೆತರುತ್ತದೆ ಎಂದು ತಿಳಿಸಿದ್ದಾರೆ.
ಆಪರೇಷನ್ ಕಾವೇರಿ ಹೆಸರಿನ ಸ್ಥಳಾಂತರಿಸುವ ಕಾರ್ಯಾಚರಣೆಯ ಅಡಿಯಲ್ಲಿ, ಶುಕ್ರವಾರ ಎರಡು ಬ್ಯಾಚ್ಗಳಲ್ಲಿ 754 ಜನರು ಭಾರತಕ್ಕೆ ಆಗಮಿಸಿದ್ದಾರೆ. ಸುಡಾನ್ ನಿಂದ ನವದೆಹಲಿಗೆ ಆಗಮಿಸಿದ 365 ಭಾರತೀಯರು ಅಧಿಕೃತ ಅಂಕಿಅಂಶಗಳ ಪ್ರಕಾರ, ಸುಡಾನ್ನಿಂದ ಮನೆಗೆ ಮರಳಿದ ಒಟ್ಟು ಭಾರತೀಯರ ಸಂಖ್ಯೆ ಈಗ 1,954 ಆಗಿದೆ. ಸೌದಿ ಅರೇಬಿಯಾದ ಜೆಡ್ಡಾ ನಗರದಿಂದ ಭಾರತೀಯರನ್ನು ಮರಳಿ ಕರೆತರಲಾಯಿತು, ಅಲ್ಲಿ ಭಾರತವು ಸ್ಥಳಾಂತರಿಸುವವರಿಗೆ ಶಿಬಿರವನ್ನು ಸ್ಥಾಪಿಸಿದೆ.