ರಾಯಚೂರು, ಏ 28 (DaijiworldNews/SM): ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಬಾರಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಿದ್ದಾರೆ. ಆದರೆ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಒಬ್ಬರೆ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್ಗೆ ಟಿಕೆಟ್ ಕೊಟ್ಟಿದಾರಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗ ಮಾತನಾಡಿದ ಅವರು, ಮುಸ್ಲಿಂರಿಗೆ 14 % ಕ್ರಿಶ್ಚಿಯನ್ರಿಗೆ 2% ಟಿಕೆಟ್ ಜನಸಂಖ್ಯೆಯಿದೆ ಅವರಿಗೆ ನಾವು ಟಿಕೆಟ್ ನೀಡಿದ್ದೇವೆ, ಬಿಜೆಪಿಯವರು ಒಬ್ಬರಿಗಾದರೂ ಟಿಕೆಟ್ ನೀಡಿದ್ದೀರಾ ಎಂದು ಪ್ರಶ್ನೆಸಿದ್ದಾರೆ.
ಬಿಜೆಪಿಯವರು ದೇಷ್ವದ ರಾಜಕಾರಣ ಮಾಡುತ್ತಾರೆ. ಮುಸ್ಲಿಂರ ಮೀಸಲಾತಿ ತೆಗೆದು ಹಾಕಿದರು ಬಿಜೆಪಿಯವರು ದ್ವೇಷದ ರಾಜಕಾರಣ, ಮತ ಧೃವಿಕರಣ ಮಾಡುತ್ತಿದ್ದಾರೆ. ಸಂಘ ಪರಿವಾರದವರು ಹುಟ್ಟಿದಾಗಿನಿಂದ ಸಮಾಜ ಒಡೆಯುವುದರಲ್ಲಿ ನಿರತರಾಗಿದ್ದಾರೆ. ಒಂದು ಧರ್ಮದವರನ್ನ ಇನ್ನೊಂದು ಧರ್ಮದವರ ಮೇಲೆ ಎತ್ತಿಕಟ್ಟುವುದು ಮಾಡುತ್ತಿದ್ದಾರೆ ಎಂದು ಸಂಘ ಪರಿವಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.