ಬೆಂಗಳೂರು, ಏ 25 (DaijiworldNews/MS): ಸರ್ಕಾರಿ ನೌಕರನಾಗಿದ್ದಾಗ ಹಣ ದುರ್ಬಳಕೆ ಮಾಡಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ 80 ವರ್ಷದ ವ್ಯಕ್ತಿಗೆ ಅನುಕಂಪದ ಆಧಾರದ ಮೇಲೆ ಇಡೀ ದಿನ ಕೋರ್ಟ್ನಲ್ಲೇ ಕುಳಿತುಕೊಳ್ಳುವ ಮೂಲಕ ಅದನ್ನೇ ಶಿಕ್ಷೆಯಾಗಿ ಪರಿವರ್ತಿಸಿದ ಅಪರೂಪದ ಪ್ರಸಂಗ ನಡೆದಿದೆ.
ಮೈಸೂರಿನ ಹನುಮಂತ ರಾವ್ ಸರಕಾರಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದಾಗ ಹಣಕಾಸು ದುರ್ಬಳಕೆ ಮಾಡಿದ್ದ ಆರೋಪದ ಎದುರಿಸಿದ್ದರು. ಇದಕ್ಕೆ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಶಿಕ್ಷೆಯನ್ನು ಪ್ರಶ್ನಿಸಿ ಹನುಮಂತ ರಾವ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅಪರಾಧಿಗೆ ಈಗ 80 ವರ್ಷ ವಯಸ್ಸಾಗಿದೆ.
ಮೈಸೂರಿನ ಹನುಮಂತ ರಾವ್ ಜೈಲು ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್ ವಿಶ್ವಜಿತ್ ಶೆಟ್ಟಿ ಅವರ ಪೀಠ, ಅರ್ಜಿದಾರರಿಗೆ ವಯಸ್ಸಾಗಿದ್ದು, ದುರ್ಬಳಕೆ ಹಣ ಕೂಡ ಸರ್ಕಾರ ವಸೂಲಿ ಮಾಡಿದೆ. ದಂಡ ವಿಧಿಸಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಲಾಗಿದೆ ಹೀಗಾಗಿ, ಒಂದು ದಿನ ಕಲಾಪ ಮುಗಿಯುವರೆಗೆ ಕುಳಿತುಕೊಳ್ಳುವ ಶಿಕ್ಷೆ ವಿಧಿಸಲಾಗುವುದು ಎಂದು ಪೀಠ ಆದೇಶಿಸಿದೆ.