ನವದೆಹಲಿ, ಏ 25 (DaijiworldNews/MS): ಅಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್'ನಿಂದ ಭಾರತೀಯರ ಮೊದಲ ಬ್ಯಾಚ್ ತವರು ದೇಶಕ್ಕೆ ಹೊರಟಿದೆ. ಸುಮಾರು 278 ಪ್ರಯಾಣಿಕರನ್ನ ಹೊತ್ತ ಭಾರತೀಯ ನೌಕಾಪಡೆಯ ಗಸ್ತು ನೌಕೆ ಐಎನ್ಎಸ್ ಸುಮೇಧಾ ಹಡಗು ಸುಡಾನ್ ದೇಶದ ಪೋರ್ಟ್ ನಿಂದ ಜೆಡ್ಡಾ ಪ್ರಯಾಣಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಐಎನ್ಎಸ್ ಸುಮೇಧಾದಲ್ಲಿದ್ದ ಭಾರತೀಯರ ಫೋಟೋಗಳನ್ನ ಟ್ವೀಟ್ ಮಾಡಿದ್ದು, ತಮ್ಮ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಹೇಳಲು ಕೆಲವರು ರಾಷ್ಟ್ರಧ್ವಜವನ್ನ ಹಿಡಿದಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
ಸೇನೆ ಮತ್ತು ಅರೆಸೇನಾ ಗುಂಪಿನ ನಡುವೆ ಭೀಕರ ಕಾಳಗ ನಡೆಯುತ್ತಿರುವ ಸುಡಾನ್ನಿಂದ ಸ್ಥಳಾಂತರಿಸಿದ ಭಾರತೀಯರ ಗುಂಪಿನಲ್ಲಿ ಮಕ್ಕಳೂ ಸೇರಿದ್ದಾರೆ.
ಸುಡಾನ್ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಮರಳಿ ಕರೆತರಲು ‘ಆಪರೇಷನ್ ಕಾವೇರಿ’ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸುಮಾರು 500 ಭಾರತೀಯರು ಸುಡಾನ್ ಬಂದರನ್ನು ತಲುಪಿದ್ದಾರೆ. ಅವರನ್ನು ಕರೆತರಲು ನಮ್ಮ ಹಡಗುಗಳು ಮತ್ತು ವಿಮಾನಗಳು ಸಜ್ಜಾಗಿವೆ.