ಬೆಂಗಳೂರು, ಮಾ25(SS): ಸುಮಲತಾ ಅಂಬರೀಷ್ ಒಬ್ಬ 'ಗಂಡುಮಗಳು', ಅವರ ಧೈರ್ಯವನ್ನು ಮೆಚ್ಚುವಂಥದ್ದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿಯನ್ನು ಮಂಡ್ಯ ಲೋಕಷಭೆ ಕ್ಷೇತ್ರದಲ್ಲಿ ಕಣಕ್ಕಿಳಿಸದೆ ತಮಗೆ ಬೆಂಬಲ ಘೋಷಿಸಿರುವ ಬಿಜೆಪಿಗೆ ಧನ್ಯವಾದ ಹೇಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್, ಯಡಿಯೂರಪ್ಪ ಅವರನ್ನು ಸುಮಲತಾ ಭೇಟಿ ಮಾಡಿದ್ದಾರೆ,
ಸುಮಲತಾ ಅವರ ಸ್ಪರ್ಧೆಯಿಂದ ಮತ್ತು ಅವರಿಗೆ ದೊರೆತಿರುವ ಬೆಂಬಲನ್ನು ಕಂಡು ಅಪ್ಪ-ಮಕ್ಕಳಿಗೆ ಈಗಾಗಲೇ ಅತಂತ್ರ ಸ್ಥಿತಿ ಉಂಟಾಗಿದೆ. ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಶೋಭಾ, ಮಾಜಿ ಸಚಿವ, ನಟ ಅಂಬರೀಷ್ ಅವರು ನಿಧನರಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರದರ್ಶಿಸಿದ ಅಭಿಮಾನ ನಿಜವೇ ಆಗಿದ್ದರೆ, ತಮ್ಮ ಮಗ ನಿಖಿಲ್ ಸಲ್ಲಿಸುವ ನಾಮಪತ್ರವನ್ನು ಹಿಂದಕ್ಕೆ ಪಡೆಯಲಿ ಎಂದು ಹೇಳಿದರು.
ಸುಮಲತಾ ಅಂಬರೀಷ್ ಅವರ ವಿರುದ್ಧ ಮಗನನ್ನು ಕಣಕ್ಕೆ ಇಳಿಸದೆಯೇ ಇರುವುದು ನಿಜವಾದ ಅಭಿಮಾನ. ಅದನ್ನು ಮಾಡಿ ತೋರಿಸಲಿ ಎಂದು ಸವಾಲ್ ಹಾಕಿದರು.