ಚಿಕ್ಕಮಗಳೂರು, ಏ 25 (DaijiworldNews/HR): ತಾಕತ್ತಿದ್ದರೆ ಸಿದ್ದರಾಮಯ್ಯ ರಾಜಕೀಯ ನಿವೃತ್ತಿಯಾಗಿ ಪಕ್ಷ ಸಂಘಟನೆ ಮಾಡಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ.
ಈ ಕುರಿತು ಮಾತಾನಾಡಿದ ಅವರು, ಸಿದ್ದುವಿನದ್ದು ಅವಕಾಶವಾದ ರಾಜಕಾರಣ, ಅಧಿಕಾರದ ದಾಹ. ಸಿದ್ದು ಜೆಡಿಎಸ್ ಯಾಕೆ ಬಿಟ್ಟು ಬಂದರು, ಅಲ್ಲಿ ಫೇಲ್ ಆಗಿ ಕಾಂಗ್ರೆಸ್ ಸೇರಿದ್ದಾರೆ. ಸಿಎಂ, ವಿಪಕ್ಷ ನಾಯಕ ಸ್ಥಾನ ಇಲ್ಲ ಅಂದ್ರೆ ಕಾಂಗ್ರೆಸ್ಸಿಗೆ ಒದ್ದು ಬರ್ತಾರೆ. ಅವರದ್ದು ವಿಚಾರ ಸಿದ್ದಾಂತ ಅಲ್ಲ, ಅಧಿಕಾರಕ್ಕೋಸ್ಕರ ಹೇಳುತ್ತಾರೆ ಎಂದರು.
ಇನ್ನು ನನಗೆ ಅಧಿಕಾರವೇ ಮುಖ್ಯ ಅಂದಿದ್ರೆ ಅವರಂತೆ ಮಾಡುತ್ತಿದ್ದೆ. ನಾನು ನಾಯಕರು ಹೇಳಿದಂತೆ ರಾಜೀನಾಮೆ ಅಲ್ಲ. ನಿವೃತ್ತಿಯಾಗಿದ್ದೇನೆ. ಈಗ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದಿದ್ದಾರೆ.
ಸಿದ್ದರಾಮಯ್ಯಗೆ ಬಿಜೆಪಿ ಶಿಸ್ತಿನ ಬಗ್ಗೆ ಕಲ್ಪನೆನೇ ಇಲ್ಲ. ನಮ್ಮ ನಾಯಕರು ಚುನಾವಣೆಗೆ ನಿಲ್ಲಬೇಡ, ನಿವೃತ್ತಿಯಾಗು ಅಂದ್ರೆ ನಿವೃತ್ತಿಯಾದೆ ಎಂದು ಹೇಳಿದ್ದಾರೆ.