ಬೆಂಗಳೂರು, ಏ 25 (DaijiworldNews/MS): ವಿಧಾನಸಭಾ ಚುನಾವಣೆ ಕಾವು ಜೋರಾಗಿದ್ದು, ನಾಮಪತ್ರ ಹಿಂತೆಗೆತ ನಿನ್ನೆಗೆ ಕೊನೆಗೊಂಡ ಕಾರಣ ಕಣದಲ್ಲಿ ಯಾರ್ಯಾರಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಈಗಾಗಲೇ ಸಿಕ್ಕಿದ್ದೆ. ಪಕ್ಷದಲ್ಲಿ ಟಿಕೆಟ್ ವಂಚಿತರು ಬಂಡಾಯ ಅಭ್ಯರ್ಥಿಗಳಾಗಿ ಹಲವು ಮಂದಿ ಈ ಬಾರಿ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಗುಜರಾತ್ ರಾಜ್ಯದ ಮಾದರಿಯನ್ನು ಅನುಸರಿಸಿ ಹಲವು ಹಾಲಿ ಶಾಸಕರಿಗೆ, ಕುಟುಂಬ ರಾಜಕಾರಣಕ್ಕೆ ಮಣೆ ಹಾಕದ ಕಾರಣ ಬಿಜೆಪಿಯಲ್ಲಿ ಬಂಡಾಯ ಹೊಗೆ ಜೋರಾಗಿಯೇ ಇದೆ.
ಬಿಜೆಪಿಯ ಬಂಡಾಯ ಅಭ್ಯರ್ಥಿಗಳು ವಿವರ ಇಲ್ಲಿದೆ: ಬೈಲಹೊಂಗಲ-ವಿಶ್ವನಾಥ ಪಾಟೀಲ, ಚನ್ನಗಿರಿ-ಮಾಡಾಳು ಮಲ್ಲಿಕಾರ್ಜುನ್, ಕಾರವಾರ-ಗಂಗಾಧರ ಭಟ್, ಅಫಜಲಪುರ-ನಿತಿನ್ ಗುತ್ತೇದಾರ, ಕುಂದಗೋಳ-ಎಸ್.ಐ ಚಿಕ್ಕನಗೌಡ್ರ, ರಾಣಿಬೆನ್ನೂರು-ಸಂತೋಷ ಕುಮಾರ, ಹೊಸದುರ್ಗ-ಗೂಳಿಹಟ್ಟಿ ಶೇಖರ್, ಹೊಳಲ್ಕೆರೆ-ಜಯಸಿಂಹ, ಬಾಗಲಕೋಟೆ-ಮಲ್ಲಿಕಾರ್ಜುನ, ನಾಗಮಂಗಲ-ಫೈಟರ್ ರವಿ, ಕೊಳ್ಳೆಗಾಲ-ರಾಚಯ್ಯ, ಗಾಂಧಿನಗರ-ಕೃಷ್ಣಯ್ಯ ಶೆಟ್ಟಿ, ಮಾಲೂರು-ವಿಜಯಕುಮಾರ್, ತುಮಕೂರು-ಸೊಗಡು ಶಿವಣ್ಣ, ಪುತ್ತೂರು-ಅರುಣ್ಕುಮಾರ್ ಪುತ್ತಿಲ, ಕೊರಟಗೆರೆ-ಮುನಿಯಪ್ಪ