ತಿರುವನಂತಪುರಂ, ಏ 25 (DaijiworldNews/HR): ಕೇರಳದಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿ ವಾಟರ್ ಮೆಟ್ರೊಗೆ ಚಾಲನೆ ನೀಡಿದ್ದಾರೆ.
ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಿರ್ವಹಿಸಿದ ಪ್ರಧಾನಿ ಮೋದಿ ಕೇರಳ ಅಭಿವೃದ್ಧಿ ಆದರೆ ದೇಶ ವೇಗವಾಗಿ ಅಭಿವೃದ್ದಿ ಹೊಂದುತ್ತದೆ ಎಂದಿದ್ದಾರೆ.
ಇನ್ನು ಇಂದು ಪ್ರಧಾನಿ ಮೋದಿಯವರು ತಿರುವನಂತಪುರಂ- ಕಾಸರಗೋಡು ನಡುವಿನ ಕೇರಳದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದು, ಬಳಿಕ 1,500 ಕೋಟಿ ವೆಚ್ಚದ ಡಿಜಿಟಲ್ ಸಯನ್ಸ್ ಪಾರ್ಕ್ ಗೆ ಅಡಿಗಲ್ಲು ಹಾಕಿದ್ದು, ಕೊಚ್ಚಿ ವಾಟರ್ ಮೆಟ್ರೊಗೆ ಚಾಲನೆ ನೀಡಿದ್ದಾರೆ.