ತಿರುವನಂತಪುರ, ಏ 25 (DaijiworldNews/MS): ಕೇರಳದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ.
ತಿರುವನಂತಪುರದಿಂದ ಕಾಸರಗೋಡಿನವರೆಗಿನ ಈ ಹೊಸ ಮೆಟ್ರೊ ರೈಲು ಸೇವೆಯಿಂದ ಗಡಿಭಾಗದ ಕನ್ನಡಿಗರಿಗೂ ಹೆಚ್ಚಿನ ಅನುಕೂಲವಾಗಲಿದೆ. ಎರಡು ದಿನಗಳ ಕೇರಳ ಪ್ರವಾಸಕ್ಕೆ ಆಗಮಿಸಿರುವ ಮೋದಿ ನಿನ್ನೆ ಕೊಚ್ಚಿಯಲ್ಲಿ ತಂಗಿದ್ದು ಇಂದು ಮೆಟ್ರೊ ರೈಲು ಸೇರಿ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ನಡುವೆ ಜೀವ ಬೆದರಿಕೆ ಇರುವ ಕಾರಣ ಕೇರಳದಲ್ಲಿ ಮೋದಿ ಭೇಟಿಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇನ್ನು ವಂದೇ ಭಾರತ್ ರೈಲು ಬೆಳಗ್ಗೆ 5.20ಕ್ಕೆ ತಿರುವನಂತಪುರದಿಂದ ಹೊರಟು ಮಧ್ಯಾಹ್ನ 1.25ಕ್ಕೆ ಕಾಸರಗೋಡು ತಲುಪಲಿದೆ. ಮತ್ತೆ ಕಾಸರಗೋಡಿನಿಂದ ಮಧ್ಯಾಹ್ನ 2.30 ಗಂಟೆಗೆ ಹಿಂತಿರುಗಿ ರಾತ್ರಿ 10.35 ಕ್ಕೆ ತಿರುವನಂತಪುರ ತಲುಪಲಿದೆ.