ಬೆಳಗಾವಿ, ಏ 25 (DaijiworldNews/MS): ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಧುರೀಣ ಡಿ.ಬಿ ಇನಾಂದಾರ್ ನಿಧನರಾಗಿದ್ದಾರೆ. ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಚಿಕಿತ್ಸೆ ಫಲಿಸದೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
74 ವರ್ಷದ ಇನಾಂದಾರ್ ಶ್ವಾಸಕೋಶ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಕಿತ್ತೂರು ವಿಧಾನಸಭಾ ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಸಿರಸಂಗಿ ದೇಸಾಯಿ ಫೌಂಡೇಷನ್ ಟ್ರಸ್ಟ್ ಕಾಯಂ ಸದಸ್ಯರಾಗಿದ್ದರು.
ಬೆಳಗಾವಿಯಲ್ಲಿ ಇನಾಂದಾರ್ ಕಾಂಗ್ರೆಸ್ ಪಾಲಿಗೆ ಪ್ರಬಲ ನಾಯಕರಾಗಿದ್ದರು. 1983ರಲ್ಲಿ ಕಿತ್ತೂರು ಕ್ಷೇತ್ರದಿಂದ ಜನತಾ ಪಕ್ಷದಿಂದ ಮೊದಲ ಬಾರಿ ಸ್ಪರ್ಧಿಸಿ ಗೆದ್ದಿದ್ದರು. 1994ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ದೇವರಾಜು ಅರಸು, ಎಸ್ಎಂ ಕೃಷ್ಣ, ಬಂಗಾರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಅನಾರೋಗ್ಯದ ಕಾರಣ ಕೊನೆಕ್ಷಣದಲ್ಲಿ ಬಾಬಾಸಾಹೇಬ್ ಪಾಟೀಲ್ಗೆ ಟಿಕೆಟ್ ನೀಡಲಾಗಿತ್ತು.