ನವದೆಹಲಿ, ಏ 24 (DaijiworldNews/HR): ಯುದ್ಧಪೀಡಿತ ಸುಡಾನ್ನಿಂದ ತನ್ನ ನಾಗರಿಕರನ್ನ ಸ್ಥಳಾಂತರಕ್ಕಾಗಿ ಭಾರತ, ಆಪರೇಷನ್ ಕಾವೇರಿ ಹೆಸರಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅವರು, ಯುದ್ಧಪೀಡಿತ ಸುಡಾನ್ನಿಂದ ತನ್ನ ನಾಗರಿಕರನ್ನ ಸ್ಥಳಾಂತರಕ್ಕಾಗಿ ಭಾರತ, ಆಪರೇಷನ್ ಕಾವೇರಿ ಹೆಸರಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ ಎಂದರು.
ಇನ್ನು ನಮ್ಮ ಹಡಗುಗಳು ಮತ್ತು ವಿಮಾನಗಳು ಅವರನ್ನ ಮನೆಗೆ ಮರಳಿ ತರಲು ಸಜ್ಜಾಗಿದ್ದು, ಸುಡಾನ್'ನಲ್ಲಿರುವ ನಮ್ಮ ಎಲ್ಲ ಸಹೋದರರಿಗೆ ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.