ಕಣ್ಣೂರು, ಏ 24 (DaijiworldNews/HR): ಜೆಮಿನಿ ಸರ್ಕಸ್ ಸಂಸ್ಥಾಪಕ ಜೆಮಿನಿ ಶಂಕರನ್ ಅಲಿಯಾಸ್ ಎಂವಿ ಶಂಕರನ್ (99) ಅವರು ಕಣ್ಣೂರಿನ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಭಾರತೀಯ ಸರ್ಕಸ್ನ ಪ್ರವರ್ತಕರಾಗಿದ್ದ ಜೆಮಿನಿ ಶಂಕರನ್, ಕಳೆದ ಕೆಲ ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಭಾನುವಾರ ನಿಧನರಾಗಿದ್ದಾರೆ.
ಇನ್ನು ಜೆಮಿನಿ ಶಂಕರನ್ ಅವರು ಮೂರು ವರ್ಷಗಳ ಕಾಲ ಪ್ರಸಿದ್ಧ ಸರ್ಕಸ್ ಕಲಾವಿದ ಕೀಲೇರಿ ಕುಂಞಿಕಣ್ಣನ್ ಅವರಲ್ಲಿ ತರಬೇತಿ ಪಡೆದು, ನಂತರ ಮಿಲಿಟರಿಗೆ ಸೇರಿ, ಎರಡನೇ ಮಹಾಯುದ್ದದ ನಂತರ ನಿವೃತ್ತರಾಗಿದ್ದರು.
ನ್ಯಾಷನಲ್ ಸರ್ಕಸ್ ಮತ್ತು ಗ್ರೇಟ್ ಬಾಂಬೆ ಸರ್ಕಸ್ ಸೇರಿದಂತೆ ದೇಶದ ನಾನಾ ಸರ್ಕಸ್ ಕಂಪೆನಿಗಳಲ್ಲಿ ಕೆಲಸ ಮಾಡಿದ ಅವರು, ಸ್ನೇಹಿತನೊಂದಿಗೆ ಸೇರಿ 1951 ರಲ್ಲಿ ವಿಜಯ ಸರ್ಕಸ್ ಕಂಪೆನಿಯನ್ನು ಖರೀದಿಸಿದ್ದರು. ಬಳಿಕ ಅದನ್ನೇ ಜೆಮಿನಿ ಸರ್ಕಸ್ ಎಂದು ನಾಮಕರಣ ಮಾಡಿದ್ದರು. ಇದಾದ ನಂತರ ಜಂಬೋ ಸರ್ಕಸ್ ಕಂಪೆನಿಯನ್ನೂ ಶುರು ಮಾಡಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅವರು ಅಗಲಿದ್ದಾರೆ.