ದಾವಣಗೆ, ಏ 24 (DaijiworldNews/HR): ಬಿಜೆಪಿಯ ಪರ ವಾತಾವರಣ ಕಂಡು ಬರುತ್ತಿದ್ದು, ಯಾವುದೇ ಚುನಾವಣೆಯಾಗಲಿ ಧರ್ಮ, ಜಾತಿ ವಿಷಯದ ಆಧಾರದಲ್ಲಿ ನಡೆಯುವುದಿಲ್ಲ. ಅಭಿವೃದ್ಧಿ, ಜನರಿಗೆ ಏನು ಬೇಕೋ ಅಂತಹ ವಿಷಯ ಅಂದರೆ ಶಿಕ್ಷಣ, ಆರೋಗ್ಯ, ಉದ್ಯೋಗ ವಿಷಯದ ಆಧಾರದ ಮೇಲೆ ನಡೆಯುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬರುವ ಮ್ಯಾಜಿಕ್ ನಂಬರ್ ಜೊತೆಗೆ ಹೆಚ್ಚಿನ ಸ್ಥಾನ ಗಳಿಸುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಗ್ಯಾರಂಟಿ ಎಂದರು.
ಇನ್ನು ಲಿಂಗಾಯತ ಮುಖ್ಯಮಂತ್ರಿಗಳ ಕುರಿತಂತೆ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ತಿರುಚಿಲ್ಲ. ಅವರ ಮಾತನಾಡಿದ ವಿಡಿಯೋ ಇದೆ. ಸಿದ್ದರಾಮಯ್ಯ ಅವರೇ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ. ಹಿಂದೆ ಬರೆದುಕೊಳ್ಳುವುದು ಇತ್ತು. ಈಗ ತಿರುಚಲಿಕ್ಕೆ ಬರುವುದಿಲ್ಲ. ಜನರೇನು ದಡ್ಡರಲ್ಲ ಎಂದಿದ್ದಾರೆ.