ಮುಂಬೈ, ಏ 24 (DaijiworldNews/HR): 'ಶಿವಸೇನಾ ಯಾರಿಗೆ ಸೇರಿದ್ದು ಎಂದು ನಿರ್ಧರಿಸಲು ಪಾಕಿಸ್ತಾನದ ಪ್ರಮಾಣ ಪತ್ರ ಬೇಕಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.
ಜನರಿಂದ ನಮ್ಮ ಪಕ್ಷಕ್ಕೆ ಸಿಗುತ್ತಿರುವ ಬೆಂಬಲ ನೋಡಿದರೆ ಪಾಕಿಸ್ತಾನವೂ ಹೇಳುತ್ತದೆ ಶಿವಸೇನೆ ಯಾರಿಗೆ ಸೇರಿದ್ದು ಎಂದು. ಆದರೆ ಚುನಾವಣಾ ಆಯೋಗಗಕ್ಕೆ ತಿಳಿಯುತ್ತಿಲ್ಲ. ಕಣ್ಣಿನ ಪೊರೆಯಿಂದ ಚುನಾವಣಾ ಆಯೋಗಗಕ್ಕೆ ಶಿವಸೇನಾ ಯಾರಿಗೆ ಸೇರಿದ್ದು ಎಂದು ತಿಳಿಯಲಿಲ್ಲ ಎನ್ನಿಸುತ್ತದೆ' ಎಂದು ಉದ್ಧವ್ ಠಾಕ್ರೆ ಹೇಳಿದ್ದರು.
ಈ ಹೇಳಿಕೆ ಬೆನ್ನಲ್ಲೇ ಏಕನಾಥ ಶಿಂದೆ ಪ್ರತಿಕ್ರಿಯೆ ನೀಡಿರುವ ಶಿಂಧೆ, ಶಿವಸೇನಾ ಯಾರಿಗೆ ಸೇರಲಿದೆ ಎಂದು ನಿರ್ಧರಿಸಲು ಪಾಕಿಸ್ತಾನ ಪ್ರಮಾಣ ಪತ್ರ ಬೇಕಿದೆ. ಇದು ಅತ್ಯಂತ ದುರದೃಷ್ಟಕರ ಹಾಗೂ ದುರಂತವಾಗಿದೆ' ಎಂದು ಹೇಳಿದ್ದಾರೆ.