ಲಕ್ನೋ, ಏ 24 (DaijiworldNews/HR): ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಬಿಲಾರಿ ಪ್ರದೇಶದಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ ಬಾಲಕನೊಬ್ಬ ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ.
ಸವೇಂದ್ರ ಕುಮಾರ್ (7) ಮೃತ ಬಾಲಕ.
ಬಾಲಕ ತನ್ನ ಅಕ್ಕನೊಂದಿಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಮತ್ತು ತಾಯಿಗೆ ಚಹಾ ನೀಡಲು ಹೋಗಿದ್ದಾಗ ಈ ಘಟನೆ ನಡೆದಿದೆ.
ಇನ್ನು ಬೀದಿ ನಾಯಿಗಳು ಏಕಾಏಕಿ ಬಂದು ಬಾಲಕನ ಮೇಲೆ ಎರಗಿದೆ. ಈ ವೇಳೆ ಬಾಲಕನ ಅಕ್ಕ ಕಿರುಚಾಡಿ ಅಕ್ಕಪಕ್ಕದವರ ಸಹಾಯ ಕೇಳಿದ್ದಾರೆ. ಸ್ಥಳೀಯರು ಕೋಲು, ಕಲ್ಲುಗಳಿಂದ ಬೀದಿ ನಾಯಿಗಳ ಗುಂಪನ್ನು ಓಡಿಸಲು ಯತ್ನಿಸಿದ್ದಾರೆ. ಬೀದಿ ನಾಯಿಗಳ ದಾಳಿಯಿಂದ ಗಂಭೀರ ಸ್ವರೂಪದಿಂದ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಗಂಭೀರ ಗಾಯಗೊಂಡಿದ್ದ ಬಾಲಕ ಮೃತಪಟ್ಟಿದ್ದಾನೆ.