ನವದೆಹಲಿ, ಏ 24 (DaijiworldNews/HR): ಮೇಘಾಲಯದ ಪಶ್ಚಿಮ ಖಾಸಿ ಬೆಟ್ಟಗಳಲ್ಲಿ ಇಂದು ಬೆಳ್ಳಗ್ಗೆ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಎನ್ಸಿಎಸ್, ಸೋಮವಾರ ಬೆಳಿಗ್ಗೆ 7:47 ರ ಸುಮಾರಿಗೆ ಮೇಘಾಲಯದ ಪಶ್ಚಿಮ ಖಾಸಿ ಬೆಟ್ಟಗಳಲ್ಲಿ, ಭೂಮಿಯಿಂದ 5 ಕಿಮೀ ಆಳದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.
ಇನ್ನು ಭಾನುವಾರ ಮುಂಜಾನೆ ಮೇಘಾಲಯದ ದಕ್ಷಿಣ ಗಾರೋ ಬೆಟ್ಟಗಳಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್ಸಿಎಸ್ ತಿಳಿಸಿದೆ.