ಮುಂಬೈ, ಏ 24 (DaijiworldNews/MS): ಮಹಾರಾಷ್ಟ್ರ ವಿಧಾನಸಭೆಗೆ ಯಾವುದೇ ಕ್ಷಣದಲ್ಲಿ ಚುನಾವಣೆ ನಡೆಯಬಹುದು ಮತ್ತು ತಮ್ಮ ಪಕ್ಷ ಇದಕ್ಕೆ ಸಜ್ಜಾಗಿದೆ ಎಂದು ಮಾಜಿ ಸಿಎಂ ಉದ್ಭವ್ ಠಾಕ್ರೆ ಹೇಳಿದ್ದಾರೆ.
ಮುಂದಿನ 15-20 ದಿನದೊಳಗೆ ಏಕನಾಥ ಶಿಂಧೆ ಸರ್ಕಾರ ಪತನವಾಗಲಿದೆ ಎಂಬ ಶಿವಸೇನೆ ನಾಯಕ ಸಂಜಯ್ ರಾವತ್ ಭವಿಷ್ಯ ನುಡಿದ ಬೆನ್ನಲ್ಲೇ ಉದ್ಭವ್ ಈ ರೀತಿ ಹೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದ್ದು, ತೀರ್ಪು ನಮ್ಮ ಪರವಾಗಿ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಆ ನಂತರ ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು ಎಂದಿದ್ದಾರೆ.
ಜೂನ್ 2022 ರಲ್ಲಿ ಏಕನಾಥ್ ಶಿಂಧೆ ಬಂಡಾಯವೆದ್ದಾಗ ಶಿವಸೇನೆ ಪಕ್ಷದಲ್ಲಿ ಎರಡು ಬಣಗಳಾಗಿ ಹೊರಹೊಮ್ಮಿತು