ಶಿವಮೊಗ್ಗ, ಏ 23 (DaijiworldNews/HR): ಲಿಂಗಾಯತ ಸಮಾಜಕ್ಕೆ ಕಾಂಗ್ರೆಸ್ ಮಾಡಿದ್ದಷ್ಟು ದ್ರೋಹ ಯಾರು ಮಾಡಿಲ್ಲ. ನಮ್ಮ ಬಿಜೆಪಿ ನಾಯಕರು ಯಾರು ಜಾತಿ ರಾಜಕಾರಣ ಮಾಡಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಬಗ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಲಿಂಗಾಯತ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಮಾಡಿದ್ದಷ್ಟು ದ್ರೋಹ ಯಾರು ಮಾಡಿಲ್ಲ. ಲಿಂಗಾಯತರಿಗೆ ಮಾಡಿದ ದ್ರೋಹದಿಂದಾಗಿ ಅವರ ಸರ್ಕಾರ ಕಳೆದುಕೊಂಡಿದ್ದಾರೆ ಎಂದರು.
ಇನ್ನು ಸಿದ್ದರಾಮಯ್ಯ ಅವರು ಮಾಡಿದ ತಪ್ಪನ್ನು ವರುಣದಲ್ಲಿ ಈ ಬಾರಿ ಅನುಭವಿಸುತ್ತಾರೆ. ರಾಜ್ಯದ ಜನ ಜಾತಿ ರಾಜಕಾರಣಕ್ಕೆ ಬೆಂಬಲಿಸಲ್ಲ. ರಾಷ್ಟ್ರೀಯ ವಿಚಾರಕ್ಕೆ ಬೆಂಬಲ ಕೊಡ್ತಾರೆ. ಕಾಂಗ್ರೆಸ್ನವರ ಪಾಪ ತುಂಬಿದೆ. ಈ ಬಾರಿ ಸಿದ್ದರಾಮಯ್ಯ, ಡಿಕೆಶಿ ಇಬ್ಬರು ಸೋಲುತ್ತಾರೆ. ಅವರಿಬ್ಬರು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಯಾರು ಜಾತಿ ರಾಜಕಾರಣ ಮಾಡಲ್ಲ ಎಂದು ಹೇಳಿದ್ದಾರೆ.