ನವದೆಹಲಿ, ಏ 23 (DaijiworldNews/HR): ಉದ್ಯಮಿಗಳು ಶೀಘ್ರದಲ್ಲೇ ವಿದೇಶಿ ವ್ಯಾಪಾರವನ್ನ ರೂಪಾಯಿಗಳಲ್ಲಿ ಇತ್ಯರ್ಥಪಡಿಸಲು ಸಾಧ್ಯವಾಗುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭರವಸೆಯನ್ನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ವಿವಿಧ ದೇಶಗಳ ಅನೇಕ ಬ್ಯಾಂಕುಗಳು ಭಾರತೀಯ ಬ್ಯಾಂಕುಗಳಲ್ಲಿ ವಿಶೇಷ ವೋಸ್ಟ್ರೋ ಖಾತೆಗಳನ್ನು ತೆರೆಯುತ್ತಿವೆ ಎಂದರು.
ಇನ್ನು ಯುಕೆ, ಸಿಂಗಾಪುರ್ ಮತ್ತು ನ್ಯೂಜಿಲೆಂಡ್ ಸೇರಿದಂತೆ 18 ದೇಶಗಳಲ್ಲಿ ಆಯಾ ಬ್ಯಾಂಕುಗಳಲ್ಲಿ ವಿಶೇಷ ರೂಪಾಯಿ ವೋಸ್ಟ್ರೋ ಖಾತೆಗಳನ್ನು ತೆರೆಯಲು 60 ವಿನಂತಿಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮೋದಿಸಿದೆ. ಕೇಂದ್ರ ಬ್ಯಾಂಕ್ ವಿವಿಧ ದೇಶಗಳಲ್ಲಿನ ತನ್ನ ಸಹವರ್ತಿಗಳೊಂದಿಗೆ ಈ ವಿಷಯವನ್ನು ಚರ್ಚಿಸುತ್ತಿದೆ ಎಂದು ಹೇಳಿದ್ದಾರೆ.