ಚಂಡೀಗಢ, ಏ 23 (DaijiworldNews/HR): ಖಲಿಸ್ತಾನಿಗಳ ನಾಯಕ, ಪಂಜಾಬ್ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಅಮೃತ್ಪಾಲ್ ಸಿಂಗ್ ನನ್ನು ಕೊನೆಗೂ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಕಳೆದ ಮಾರ್ಚ್ 18ರಿಂದ ತಲೆ ಮರೆಸಿಕೊಂಡಿದ್ದ ಅಮೃತ್ ಪಾಲ್ ಸಿಂಗ್ ನನ್ನು ಪೊಲೀಸರು ಸತತವಾಗಿ ಹುಡುಕಾಟ ನಡೆಸುತ್ತಿದ್ದು, ಇದೀಗ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಇನ್ನು ಕಳೆದ ಐದು ವರ್ಷಗಳಿಂದಲೂ ಪಂಜಾಬ್ನಲ್ಲಿ ಸಕ್ರಿಯನಾಗಿದ್ದ ಅಮೃತ್ ಪಾಲ್ ಸಿಂಗ್, ಖಲಿಸ್ತಾನಿ-ಪಾಕಿಸ್ತಾನಿ ಏಜೆಂಟ್ ಎಂದು ಪರಿಗಣಿಸಿತ್ತು.
ಅಮೃತ್ಪಾಲ್ ಸಿಂಗ್ನನ್ನು ಅಸ್ಸಾಂನ ದಿಬ್ರುಗಢ್ನ ಜೈಲಿಗೆ ಕರೆದೊಯ್ಯಲಾಗಿದ್ದು, ಖಲಿಸ್ತಾನಿ ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುತ್ತಿದ್ದ ಆತನ ವಿರುದ್ಧ ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.