ಬಾಲಾಘಾಟ್, ಏ 22 (DaijiworldNews/HR): ಬಾಲಾಘಾಟ್ ಜಿಲ್ಲೆಯ ಗರ್ಹಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡ್ಲಾ ಅರಣ್ಯದಲ್ಲಿ ಹಾಕ್ ಫೋರ್ಸ್ ಮತ್ತು ನಕ್ಸಲೀಯರ ನಡುವೆ ಎನ್ಕೌಂಟರ್ ನಡೆದಿದ್ದು, ಇಬ್ಬರು ಇಬ್ಬರು ಮಹಿಳಾ ನಕ್ಸಲೀಯರ ಹತ್ಯೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಕಡ್ಲಾ ಅರಣ್ಯದಲ್ಲಿ ನಕ್ಸಲೀಯರೊಂದಿಗಿನ ಎನ್ಕೌಂಟರ್ನಲ್ಲಿ ನಕ್ಸಲೈಟ್ ಸುನೀತಾ ಮತ್ತು ಸರಿತಾ ಹತ್ಯೆಗೀಡಾದವರು.
ಇನ್ನು ಸುನೀತಾ ಎಸಿಎಂ ಭೋರಂ ದೇವ್ ಏರಿಯಾ ಕಮಾಂಡರ್, ತಾಡಾ ದಲಂನಲ್ಲಿದ್ದರು. ಅವರು ಪ್ರಸ್ತುತ ವಿಸ್ತಾರ್ ದಲಂನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸರಿತಾ ಖತಿಯಾ ಮೋಚಾ ಎಸಿಎಂ, ಕಬೀರ್ ಜೊತೆಗೆ ಕಾವಲುಗಾರರಾಗಿ ಕೆಲಸ ಮಾಡಿದರು. ಆಕೆಯೂ ಸದ್ಯ ವಿಸ್ತಾರ ದಳಕ್ಕೆ ಬಂದಿದ್ದಳು ಎನ್ನಲಾಗಿದೆ.