ಬೆಂಗಳೂರು, ಏ 22 (DaijiworldNews/MS): ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ನಲ್ಲಿ ಜೋರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಬಣ ರಾಜಕೀಯ ಚುನಾವಣೆಯ ಘೋಷಣೆ ಬಳಿಕ ತಣ್ಣಗಾಗಿದೆ.
ಇದೀಗ ಇಬ್ಬರು ನಾಯಕರು ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಮತಬೇಟೆಯ ನಡುವೆ ಇಬ್ಬರು ನಾಯಕರು ಹೆಗಲ ಮೇಲೆ ಕೈ ಹಾಕಿಕೊಂಡು ಜೊತೆಯಾಗಿ ಕ್ಯಾಮೆರಾಕ್ಕೆ ಪೋಸು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ನೀಡಿದ ಸಿದ್ದು- ಡಿಕೆಶಿ ರಾಜಕೀಯ ವಿರೋಧಿಗಳಿಗೆ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ.
ಸಿದ್ದರಾಮಯ್ಯ ಧರಿಸಿದ್ದ ಕುರ್ತಾದಲ್ಲಿ ಕಾಂಗ್ರೆಸ್ ಬ್ಯಾಡ್ಜ್ ಇಲ್ಲದಿರುವುದನ್ನು ಗಮನಿಸಿ ಡಿಕೆಶಿ ಸಿದ್ದು ಜೇಬಿನಲ್ಲಿದ್ದ ಪಕ್ಷದ ಚಿಹ್ನೆ ತೊಡಿಸಿದ್ದಾರೆ.ಒಟ್ಟಾರೆ ಈ ಸ್ನೇಹಮಯ ಪೋಟೋಗಳು ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.