ಬೆಂಗಳೂರು, ಏ 22 (DaijiworldNews/MS): ಬೆಂಗಳೂರು ಮೂಲದ ಸ್ಟಾರ್ಟಪ್ ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ ಇಂದು ಇಸ್ರೋ ನಿರ್ಮಿತ ಪಿಎಸ್ಎಲ್ವಿ-ಸಿ55 ರಾಕೆಟ್ ಮೂಲಕ ತನ್ನ ಪ್ರಾಯೋಗಿಕ ಪೇಲೋಡ್ ಹಾಲ್-ಎಫೆಕ್ಸ್ ಥ್ರಸ್ಟರ್ ಅನ್ನು ಉಡಾವಣೆ ಮಾಡಲಿದೆ.
ಸಣ್ಣ ಉಪಗ್ರಹಗಳಿಗೆ ಸೌರ ವಿದ್ಯುತ್ ಚಾಲಿತ ಎಂಜಿನ್ ಅನ್ನು ಪರಿಚಯಿಸಲಿರುವ ಅರ್ಕಾ ಸರಣಿಯ ಎಚ್ಇಟಿ ಶನಿವಾರ ನಭಕ್ಕೆ ಚಿಮ್ಮಲಿದೆ.
ಇದು ಇವಿ (ಎಲೆಕ್ಟ್ರಿಕ್ ವೆಹಿಕಲ್) ಕ್ರಾಂತಿಯನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ. ಸಾಂಪ್ರದಾಯಿಕ ರಾಕೆಟ್ಗಳಿಗೆ ಹೋಲಿಸಿದರೆ ಬೆಲ್ಲಾಟ್ರಿಕ್ಸ್ ಅಭಿವೃದ್ಧಿಪಡಿಸಿರುವ ಹಾಲ್-ಎಫೆಕ್ಟ್ ಥ್ರಸ್ಟರ್ ಸಾಂಪ್ರದಾಯಿಕ ರಾಕೆಟ್ಗಳಿಗೆ ಹೋಲಿಸಿದರೆ ಹೆಚ್ಚಿನ ನೂಕು ಬಲ ಅಥವಾ ಮೈಲೇಜ್ ನೀಡುತ್ತದೆ.ಇದು ಹೈಡ್ರಾಜಿನ್ನಂತಹ ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆಎಂದು ವರದಿಯಾಗಿದೆ.