ಬೆಂಗಳೂರು, ಏ 22 (DaijiworldNews/MS): ರಾಜ್ಯದಲ್ಲಿ ಈ ಬಾರಿ ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ 36 ಮಂದಿ ಪ್ರಮುಖ ನಾಯಕರು ಪಕ್ಷಾಂತರ ಮಾಡಿದ್ದಾರೆ.
ಆ ಪೈಕಿ ಆಡಳಿತಾರೂಢ ಬಿಜೆಪಿಯಿಂದ ಶಾಸಕರಾದಿಯಾಗಿ ಬರೋಬ್ಬರಿ 20ಮಂದಿ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಹಾರಿದ್ದಾರೆ. ಅದೇರೀತಿ ಕಾಂಗ್ರೆಸ್ನಿಂದ 14 ನಾಯಕರು ಬಿಜೆಪಿ-ಜೆಡಿಎಸ್ಗೆ ವಲಸೆ ಹೋಗಿದ್ದಾರೆ.
ಈ ನಡುವೆ ಜೆಡಿಎಸ್ನ ಇಬ್ಬರು ಪ್ರಮುಖ ನಾಯಕರು ಪಕ್ಷ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಿರುವುದಾಗಿ ವರದಿಯಾಗಿದೆ. ಆದರೆ, ಪಕ್ಷ ತೊರೆದವರಲ್ಲಿ ಹೆಚ್ಚಿನವರು ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದವರು ಅಧಿಕ ಮಂದಿ ಎನ್ನುವುದು ಗಮನಾರ್ಹ.
ಒಟ್ಟಾರೆ ಈ ಚುನಾವಣೆಯ ಸಂದರ್ಭದಲ್ಲಿ ನಡೆದಿರುವ ಜಿಗಿತ ಎಲ್ಲಾ ಪಕ್ಷಗಳಿಗೂ ಮತಬ್ಯಾಂಕ್ ಚದುರಿದರೆ ಎಂಬ ಭಯವನ್ನು ಹುಟ್ಟುಹಾಕಿದೆ