ನವದೆಹಲಿ, ಏ 21 (DaijiworldNews/MS): ಸುಡಾನ್ನಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಹಾಗೂ ಅವರ ಸ್ಥಳಾಂತರದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಉನ್ನತ ಮಟ್ಟದ ಸಭೆಯಲ್ಲಿ ವಿದೇಶಾಂಗ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಸುಡಾನ್ಗಿರುವ ಭಾರತದ ರಾಯಭಾರಿ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯಲ್ಲಿ ಮೋದಿಯವರು ಸುಡಾನ್ನಲ್ಲಿನ ಇತ್ತೀಚಿನ ವಿದ್ಯಮಾನಗಳ ಬಗ್ಗೆ ವರದಿಯನ್ನು ಕೇಳಿದ್ದು, ಅಲ್ಲಿರುವ 3,000ಕ್ಕಿಂತಲೂ ಹೆಚ್ಚು ಭಾರತೀಯರ ಸುರಕ್ಷೆ ಬಗ್ಗೆ ಗಮನ ಹರಿಸುವಂತೆ ಹೇಳಿದ್ದಾರೆ. ಮಾತ್ರವಲ್ಲದೇ ಅಲ್ಲಿರುವ ಭಾರತೀಯರ ಸ್ಥಳಾಂತರಿಸುವ ಯೋಜನೆಗಳನ್ನು ಸಿದ್ಧಪಡಿಸುವಂತೆ ಹಾಗೂ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವಂತೆ ತಿಳಿಸಿದ್ದಾರೆ.
ಸುಡಾನ್ನಲ್ಲಿ ಅಧಿಕಾರಕ್ಕಾಗಿ ಮಿಲಿಟರಿ ಪಡೆಗಳ ನಡುವೆ ನಡುವೆ ಜಗಳ ನಡೆಯುತ್ತಿದ್ದು ಭಾರೀ ಸಾವು-ನೋವುಗಳು ಸಂಭವಿಸಿದೆ.