ನವದೆಹಲಿ, ಏ 21 (DaijiworldNews/MS): ದಕ್ಷಿಣ ದೆಹಲಿಯ ಸಾಕೇತ್ ಕೋರ್ಟ್ ಅವರಣದಲ್ಲಿ ಒಳಗೆ ಮಹಿಳೆಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
ದೆಹಲಿಯ ಸಾಕೇತ್ ಜಿಲ್ಲಾ ಕೋರ್ಟಿನ ಆವರಣದಲ್ಲಿ ವಕೀಲರ ಧಿರಿಸಿನಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಅವರನ್ನು ಅಲ್ಲಿಯೇ ಕೋರ್ಟ್ ಆವರಣದಲ್ಲಿ ಇದ್ದ ಪೊಲೀಸ್ ಅಧಿಕಾರಿ, ಮತ್ತಿತರರು ಸೇರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದೆ.
ಹಣಕಾಸಿನ ವಿವಾದಕ್ಕೆ ಸಂಬಂಧಪಟ್ಟ ಯಾವುದೋ ಕೇಸ್ನ ವಿಚಾರಣೆಗಾಗಿ ಈ ಮಹಿಳೆ ಕೋರ್ಟ್ಗೆ ಬಂದಿದ್ದರು. ಆರೋಪಿ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.