ತುಮಕೂರು, ಏ 20 (DaijiworldNews/MS): ಮನೆ ಮಹಡಿ ಮೇಲೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣ ಸಾವನ್ನಪ್ಪಿರುವ ಘಟನೆ ತುಮಕೂರಿನ ಗುರುಸಿದ್ಧರಾಮೇಶ್ವರ ದೇವಸ್ಥಾನ ಬಳಿ ನಡೆದಿದೆ.
ಮೃತಪಟ್ಟ ಬಾಲಕರನ್ನು ವೀರಭದ್ರಯ್ಯ ಎಂಬುವರ ಪುತ್ರ ಯತೀಶ್ (14), ಸಿದ್ದಲಿಂಗಯ್ಯ ಎಂಬುವರ ಮಗ ಪ್ರಜ್ವಲ್ (14) ಎಂದು ಗುರುತಿಸಲಾಗಿದೆ.
ಯತೀಶ್ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದು ಬೆಳಗ್ಗೆ ಸ್ನೇಹಿತ ಪ್ರಜ್ವಲ್ ಜತೆ ಮನೆಯ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ಮನೆಯ ಮುಂದೆಯೇ ತಂತಿ ಹಾದು ಹೋಗಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.