ನವದೆಹಲಿ, ಏ 20 (DaijiworldNews/HR): ತಾಪಮಾನ ಹೆಚ್ಚಳದಿಂದಾಗಿ ಸುಮಾರು 90 ಪ್ರತಿಶತದಷ್ಟು ಭಾರತದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಹೊಸ ಅಧ್ಯಯನ ಹೇಳಿದೆ.
48 ಕ್ಕೂ ಹೆಚ್ಚು ಹವಾಮಾನ ಕೇಂದ್ರಗಳಲ್ಲಿ ಮಂಗಳವಾರ 42 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ತಾಪಮಾನ ದಾಖಲಾಗಿದ್ದು, ಶಾಖದ ಅಲೆಗಳು ಮರುಕಳಿಸುವ ಮತ್ತು ಈಗ ಹೆಚ್ಚು ಮಾರಣಾಂತಿಕವಾಗಿ ಜನರ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ.
ಇನ್ನು 'ಭಾರತದಲ್ಲಿ ಶಾಖದ ಅಲೆಗಳು ಹೆಚ್ಚು ತೀವ್ರಗೊಳ್ಳುತ್ತಿವೆ, ದೇಶದ 80% ಜನರನ್ನು ಅಪಾಯದಲ್ಲಿ ಸಿಲುಕಿಸುತ್ತಿದೆ. ಇದು ಪ್ರಸ್ತುತ ಹವಾಮಾನದ ದುರ್ಬಲತೆಯ ಮೌಲ್ಯಮಾಪನದಲ್ಲಿ ಲೆಕ್ಕಕ್ಕೆ ಸಿಗುವುದಿಲ್ಲ. ಈ ಪರಿಣಾಮವನ್ನು ತಕ್ಷಣವೇ ಪರಿಹರಿಸದಿದ್ದರೆ, ಭಾರತವು ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ತನ್ನ ಪ್ರಗತಿಯನ್ನು ನಿಧಾನಗೊಳಿಸುತ್ತದೆ ಎಂದು ವರದಿಯಾಗಿದೆ.