ನವದೆಹಲಿ, ಏ 20 (DaijiworldNews/HR): ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ದಂಪತಿಯ ಪುತ್ರಿ ಆರಾಧ್ಯ ಬಚ್ಚನ್ ತನ್ನ ಆರೋಗ್ಯದ ಬಗ್ಗೆ ನಕಲಿ ವರದಿ ಮಾಡಿದ ಯೂಟ್ಯೂಬ್ ಚಾನೆಲ್ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.
ಆರಾಧ್ಯ ಬಚ್ಚನ್ ಅವರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ 'ಸುಳ್ಳು ಸುದ್ದಿ' ವರದಿ ಮಾಡಿದ್ದಕ್ಕಾಗಿ ಯೂಟ್ಯೂಬ್ ಟ್ಯಾಬ್ಲಾಯ್ಡ್ ವಿರುದ್ಧ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ತನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದ್ದು, ಇಂತಹ ಸುದ್ದಿಗಳನ್ನು ಪ್ರಸಾರ ಮಾಡಲು ತಡೆಯಾಜ್ಞೆ ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
ಈ ಹಿಂದೆ ತನ್ನ ಮಗಳನ್ನು ಟ್ರೋಲ್ ಮಾಡಿದ ಕಾರಣಕ್ಕಾಗಿ ಅಭಿಷೇಕ್ ಬಚ್ಚನ್ ಸಿನಿಮಾವೊಂದರ ಪ್ರಚಾರದ ವೇಳೆ ಟ್ರೋಲರ್ಸ್ ಗಳ ವಿರುದ್ಧ ಅಭಿಷೇಕ್ ಆಕ್ರೋಶಗೊಂಡಿದ್ದರು. ಇದೀಗ ಆರೋಗ್ಯದ ಬಗ್ಗೆ ನಕಲಿ ವರದಿ ಮಾಡಿದ ಯೂಟ್ಯೂಬ್ ಚಾನೆಲ್ ವಿರುದ್ಧ ಆರಾಧ್ಯ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.