ಬೆಂಗಳೂರು, ಏ 20 (DaijiworldNews/MS): ಇಂದು ಹಲವೆಡೆ ಸೂರ್ಯಗ್ರಹಣ ಗೋಚರಿಸಲಿದ್ದು, ಕಂಕಣ ಮತ್ತು ಪೂರ್ಣ ಸೂರ್ಯಗ್ರಹಣಗಳು ಒಟ್ಟಿಗೆ ಸಂಭವಿಸುವುದರಿಂದ ಈ ಗ್ರಹಣವನ್ನು ಸಮ್ಮಿಶ್ರ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ.
ಇದು ಅತ್ಯಂತ ಅಪರೂಪ. ಈ ಗ್ರಹಣದಲ್ಲಿ ಸೂರ್ಯ ಉಂಗುರವಾಗಿ ಕೆಲವು ಸೆಕೆಂಡ್ಗಳ ಕಾಲ ಕಾಣಿಸಲಿದ್ದು, ಮತ್ತೆ ಮರೆಯಾಗುತ್ತದೆ. ಸೂರ್ಯಗ್ರಹಣದ ಸಮಯವು ಬೆಳಿಗ್ಗೆ 7:04 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 12:29 ರವರೆಗೆ ಮುಂದುವರಿಯುತ್ತದೆ.
ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಬದಲಿಗೆ ಆಸ್ಟ್ರೇಲಿಯಾ, ಪೂರ್ವ ಮತ್ತು ದಕ್ಷಿಣ ಏಷ್ಯಾ, ಪೆಸಿಫಿಕ್ ಮಹಾಸಾಗರ, ಅಂಟಾರ್ಟಿಕಾ ಮತ್ತು ಹಿಂದೂ ಮಹಾಸಾಗರದಿಂದ ಮಾತ್ರ ಕಾಣಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.