ಬೆಂಗಳೂರು, ಏ 20 (DaijiworldNews/MS): ಕರ್ನಾಟಕ ಹೈಕೋರ್ಟ್ ನೀಡುವ ತೀರ್ಪುಗಳು ಇನ್ನುಮುಂದೆ ಕನ್ನಡ ಭಾಷೆಯಲ್ಲಿಯೂ ಲಭ್ಯವಾಗಲಿದ್ದು, ಅದಕ್ಕಾಗಿ ಕನ್ನಡದ ತೀರ್ಪುಗಳ ವೆಬ್ ಪುಟವನ್ನು ತೆರೆದಿದೆ. ಈ ಪೇಜ್ಮಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆ ತೀರ್ಪುಗಳ ಲಭ್ಯ.
ಕೇರಳ, ಗುಜರಾತ್ ಮತ್ತು ಮಹಾರಾಷ್ಟ್ರ ಹೈಕೋರ್ಟ್ಗಳು ಈಗಾಗಲೇ ಸ್ಥಳೀಯ ಭಾಷೆಯಲ್ಲಿ ತೀರ್ಪುಗಳನ್ನು ಪ್ರಕಟಿಸಲು ಆರಂಭಿಸಿವೆ. ಆದರೆ, ಅತಿ ಹೆಚ್ಚು ತೀರ್ಪುಗಳನ್ನು ಕನ್ನಡದಲ್ಲಿ ಪ್ರಕಟಿಸಿರುವುದು ಕರ್ನಾಟಕ ಹೈಕೋರ್ಟ್ ಎನ್ನಲಾಗಿದೆ.
ಮೊದಲ ಹಂತದಲ್ಲಿ ವೆಬ್ಪೇಜ್ನಲ್ಲಿ ಕರ್ನಾಟಕ ಹೈಕೋರ್ಟ್ನ 169 https://karnatakajudiciary.kar.nic.in/hck_judgments.php ಮತ್ತು ಸುಪ್ರೀಂ ಕೋರ್ಟ್ನ 28 ಕನ್ನಡೀಕರಿಸಿದ ತೀರ್ಪುಗಳನ್ನು ಪ್ರಕಟಿಸಲಾಗಿದೆ.
ಜನಸಾಮಾನ್ಯರು ಹಾಗೂ ದಾವೆದಾರರಿಗೆ ಅನುಕೂಲ ಮಾಡಿಕೊಡಲು ಒಟ್ಟು 197 ಪ್ರಮುಖ ತೀರ್ಪುಗಳನ್ನು ಕನ್ನಡೀಕರಿಸಿ ಪ್ರಕಟಿಸಿರುವ ವೆಬ್ಪೇಜ್ಗೆ ಚಾಲನೆ ನೀಡಲಾಗಿದೆ.ʼಸುವಾಸ್ʼ ಕೃತಕ ಬುದ್ದಿಮತ್ತೆ ಟೂಲ್ ಬಳಕೆ ಮಾಡಿ ನ್ಯಾಯಾಂಗ ದಾಖಲೆ ಮತ್ತು ತೀರ್ಪುಗಳನ್ನು ಕನ್ನಡೀಕರಿಸಲಾಗುತ್ತಿದೆ.