ಹುಬ್ಬಳ್ಳಿ, ಏ 19 (DaijiworldNews/HR): "ಜಗದೀಶ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜೋಶಿ ಅವರು ಕೂಡ ಶೆಟ್ಟರ್ ಹಾದಿಯನ್ನೇ ಅನುಸರಿಸಲಿದ್ದಾರೆ" ಎಂದು ಹು- ಧಾ. ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೋರೆ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಸೇರಿದ್ದು, ಜೋಶಿ ಮತ್ತು ಶೆಟ್ಟರ ಒಟ್ಟಿಗೆ ರಾಜಕಾರಣ ಮಾಡಿಕೊಂಡು ಬಂದವರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರೋಲ್ಲ ಎಂದರು.
ಇನ್ನು ಜಗದೀಶ ಶೆಟ್ಟರ ನಡೆಯನ್ನೇ ಪ್ರಹ್ಲಾದ್ ಜೋಶಿ ಅನುಸರಿಸುತ್ತಾರೆ. ಅದಕ್ಕಾಗಿಯೇ ಹು-ಧಾ. ಪಶ್ಚಿಮ ಕ್ಷೇತ್ರದ ಟಿಕೆಟ್ ಘೋಷಣೆ ವಿಳಂಬವಾಯಿತು. ಈಗ ನನಗೆ ಟಿಕೆಟ್ ಕೊಡಲಾಗಿದೆ ಎಂದು ಹೇಳಿದ್ದಾರೆ.