ಬೆಂಗಳೂರು, ಏ 19 (DaijiworldNews/HR): ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ 1994ರ ಫಲಿತಾಂಶ ಮರುಕಳಿಸಲಿದ್ದು, ಜೆಡಿಎಸ್ಗೆ ಮರು ಜನ್ಮ ಸಿಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮನೆ ಖಾಲಿಯಾಗಿದ್ದು, ಬಿಜೆಪಿ ರಾಜ್ಯದಲ್ಲಿ ಯಾವತ್ತೂ ಪೂರ್ಣ ಬಹುಮತ ಪಡೆದಿಲ್ಲ, ಈ ಬಾರಿಯೂ ಪಡೆಯುವುದಿಲ್ಲ. ಆದರೆ ಜೆಡಿಎಸ್ಗೆ ಮರು ಜನ್ಮ ಸಿಗಲಿದೆಎಂದರು.
ಇನ್ನು ಜೆಡಿಎಸ್ ಕಥೆ ಮುಗಿದೇ ಹೋಯಿತು ಎಂಬುವವರಿಗೆ ಈಗ ಶಕ್ತಿ ಏನು ಎಂಬುದು ಅರ್ಥವಾಗುತ್ತಿದ್ದು, ಫಲಿತಾಂಶದ ನಂತರ ಎರಡೂ ಪಕ್ಷಗಳ ಭ್ರಮೆ ಕಳಚಲಿದೆ ನೋಡುತ್ತಾ ಇರಿ ಎಂದು ಹೇಳಿದ್ದಾರೆ.