ನವದೆಹಲಿ, ಏ 17 (DaijiworldNews/MS): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಮತ್ತೊಂದು ವಾಣಿಜ್ಯ ಉಡಾವಣೆಗೆ ಸಜ್ಜಾಗುತ್ತಿದೆ.
ಇಸ್ರೋ ಸಂಸ್ಥೆಯು ತನ್ನ ಹೊಸ ಪಿಎಸ್ಎಲ್ವಿ ರಾಕೆಟ್ನೊಂದಿಗೆ ಏ.22ರಂದು ಸಿಂಗಾಪುರದ ಭೂ ವೀಕ್ಷಣಾ TeLEOS-02 ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ರಾಕೆಟ್ ಅನ್ನು ವಿಶೇಷವಾಗಿ ಸಂಯೋಜಿಸಲಾಗಿದೆ. ಪಿಎಸ್ಎಲ್ವಿ ಮೂಲಕ ಇದುವರೆಗೆ 33 ದೇಶಗಳ ಒಟ್ಟು 297 ಉಪಗ್ರಹ ಉಡಾವಣೆ ಮಾಡಲಾಗಿದೆ. ಈ ಹೊಸ ರಾಕೆಟ್ 44ಮೀ. ಎತ್ತರ & 2.8ಮೀ. ವ್ಯಾಸ ಹೊಂದಿದೆ. ಇದು ನಾಲ್ಕು ಹಂತಗಳನ್ನು ಹೊಂದಿದ್ದು, ರಾಕೆಟ್ 320 ಟನ್ ತೂಕವನ್ನು ಹೊಂದಿರುವುದಾಗಿ ಇಸ್ರೋ ಹೇಳಿದೆ.
ಏ.22ಕ್ಕೆ ಮಧ್ಯಾಹ್ನ 2.19 ಕ್ಕೆ ದೇಶದ ಏಕೈಕ ಬಾಹ್ಯಾಕಾಶ ನಿಲ್ದಾಣ ಶ್ರೀಹರಿಕೋಟಾದಲ್ಲಿ ಉಡಾವಣಾ ಕೇಂದ್ರದಿಂದ TeLEOS-02 ಲಾಂಚ್ ಆಗಲಿದೆ.