ಸೂರತ್, ಏ 18 (DaijiworldNews/HR): "ಕರ್ನಾಟಕದಲ್ಲಿ ಅಮುಲ್ ಅನ್ನು ಬಹಿಷ್ಕರಿಸಬೇಕಾದ ಅಗತ್ಯವಿಲ್ಲ" ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ನಂದಿನಿ ಹಾಗೂ ಅಮುಲ್ ಹಾಲು ಒಕ್ಕೂಟಗಳ ನಡುವೆ ವಿವಾದ ಸೃಷ್ಟಿಯಾಗಿರುವ ಕುರಿತು ಮಾತನಾಡಿದ ಅವರು, "ನನ್ನ ದೃಷ್ಟಿಯಲ್ಲಿ ಅಮುಲ್ ಅನ್ನು ಬಹಿಷ್ಕರಿಸುವ ಅಗತ್ಯವಿಲ್ಲ. ನಿಮಗೇನು ಬೇಕೊ ಅದನ್ನು ಮಾಡುತ್ತಲೇ ಇರಿ. ಒಂದು ವೇಳೆ ಅಮುಲ್ ಏನಾದರೂ ಕಸಿದುಕೊಂಡರೆ ಮಾತ್ರ ಅದು ಪ್ರತಿಭಟಿಸಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ಇನ್ನು ಕರ್ನಾಟಕದ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು, ಅಮುಲ್ ಸಂಸ್ಥೆಗೆ ದಕ್ಷಿಣ ಭಾರತ ರಾಜ್ಯವಾದ ಕರ್ನಾಟಕಕ್ಕೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ನಂದಿನಿಯನ್ನು ಮುಗಿಸಲು ಆಡಳಿತಾರೂಢ ಬಿಜೆಪಿ ಸರ್ಕಾರ ಬಯಸಿದೆ ಎಂದು ಆರೋಪಿಸಿದ್ದವು.